Mangalore:  ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ: ಸಚಿವ ಸುನಿಲ್ ಕುಮಾರ್

Mangalore: ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ: ಸಚಿವ ಸುನಿಲ್ ಕುಮಾರ್

ಮಂಗಳೂರು: ಹಿಜಾಬ್ ವಿಚಾರ ಬಹಳ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಕೆಲ ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ಅರಾಜಕತೆ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹಿಜಾಬ್ ವಿವಾದ ವಿಚಾರದ ಬಗ್ಗೆ ಮಂಗಳೂರಿನಲ್ಲಿಂದು ದ.ಕ. ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದರು.




ಶಾಲೆಯ ಕಂಪೌಂಡ್ ತನಕ ಹಿಜಾಬ್, ಬುರ್ಕಾ ಧರಿಸಿಕೊಂಡು ಬರಲಿ. ಆದರೆ ಶಾಲೆಯೊಳಗೆ ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು. ರಾಜ್ಯದ ಶಾಲೆಯಲ್ಲಿ ವಸ್ತ್ರ ಸಂಹಿತೆ ಸಾಂಪ್ರದಾಯಿಕವಾಗಿ ಬಂದಿದೆ. ಸಿದ್ದರಾಮಯ್ಯರಾದಿಯಾಗಿ ಕೆಲ ಸಂಘಟನೆಗಳು ಹಿಜಾಬ್ ವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುತ್ತಿದ್ದಾರೆ. ಆದರೆ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ. ಮಹಿಳೆಯರಿಗೆ ಎಲ್ಲೂ ಪ್ರವೇಶ ನೀಡದವರು ಸರ್ಕಾರಿ ಶಾಲೆಯಲ್ಲಿ ಅವರದ್ದೆ ಆದ ಒಂದು ನಿಯಮ‌ ಮಾಡುತ್ತಾರೆ ಎಂದು ಹೇಳಿದರು.

ತ್ರಿವಳಿ ತಲಾಕ್ ರದ್ದು ಮಾಡುವ ಮೂಲಕ‌ ಮುಸ್ಲಿಂ ಮಹಿಳೆಯರಿಗೆ ಭದ್ರತೆ ನೀಡಿದ್ದು ಮೋದಿ ಸರ್ಕಾರ. ಇದನ್ನು ಮುಸ್ಲಿಂ ಮಹಿಳೆಯರು ಅರ್ಥ ಮಾಡಿಕೊಳ್ಳಲಿ. ಎಸ್.ಡಿ.ಪಿ.ಐ., ಸಿದ್ದರಾಮಯ್ಯ, ಖಾದರ್ ಹೇಳಿಕೆಯಿಂದ ಈ ರೀತಿ‌ ಮಾಡಬೇಡಿ ಎಂದು ಮಂಗಳೂರಿನಲ್ಲಿ ಸಚಿವ ಸುನಿಲ್ ಕುಮಾರ್ ಹೇಳಿದರು‌.

Ads on article

Advertise in articles 1

advertising articles 2

Advertise under the article