ಮಂಗಳೂರು: ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಅವಮಾನ ಪ್ರಕರಣ: ಪ್ರಮುಖ ಆರೋಪಿ ಮದುಮಗ ಉಮರುಲ್ಲಾ ಬಾಷಿತ್ ಬಂಧನ

ಮಂಗಳೂರು: ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಅವಮಾನ ಪ್ರಕರಣ: ಪ್ರಮುಖ ಆರೋಪಿ ಮದುಮಗ ಉಮರುಲ್ಲಾ ಬಾಷಿತ್ ಬಂಧನ

ಮಂಗಳೂರು: ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮದುಮಗ ಉಮರುಲ್ಲಾ ಬಾಷಿತ್ ನನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಮದುಮಗಳ‌ ಮನೆಯಲ್ಲಿ ಮದುವೆಯ ದಿನ ರಾತ್ರಿ ಕೊರಗಜ್ಜನ ಹೋಲುವ ವೇಷಭೂಷಣ ಧರಿಸಿ ಮದುಮಗ ಬಾತಿಷ್ ಕುಣಿದಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಘಟನೆ‌ ಹಿಂದೂ ಹಾಗೂ ಮುಸ್ಲಿಂ ಎರಡು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.ಈ ಘಟನೆಗೆ ಸಂಬಂದಿಸಿದಂತೆ ಆರೋಪಿ ಅಜ್ಞಾತ ಸ್ಥಳದಿಂದ ವೀಡಿಯೋ ಮಾಡಿ ಕ್ಷಮೆ ಯಾಚಿಸಿದ್ದ.

ವರ ಹಾಗೂ ಆತನ ಸ್ನೇಹಿತರ ವಿರುದ್ಧ ವಿಟ್ಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.ಅದರಲ್ಲಿ ಇಬ್ಬರ ಬಂಧನವಾಗಿತ್ತು.ಆದರೆ ಪ್ರಮುಖ ಆರೋಪಿ ಮದುಮಗ ಬಾತಿಷ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ.ಇಂದು ಕೇರಳದಲ್ಲಿ ಬಾತಿಷ್ ನನ್ನು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article