Mangalore:ಕೇರಳ-ಕರ್ನಾಟಕ ವಿದ್ಯಾರ್ಥಿಗಳ ತಲ್ವಾರ್ ದಾಂಧಲೆ:ಬರ್ಕೆ ಪೊಲೀಸರಿಂದ ಓರ್ವನ ಬಂಧನ
Thursday, February 3, 2022
ಮಂಗಳೂರು: ನಗರದ ಬಲ್ಲಾಳ್ ಬಾಗ್ ನ ಶ್ರೀದೇವಿ ಕಾಲೇಜು ಬಳಿ ತಲ್ವಾರ್ ಹಿಡಿದು ದಾಂದಲೆ ನಡೆಸಿದ ಓರ್ವ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಮಂಗಳೂರಿನ ವಿವೇಕನಗರ ನಿವಾಸಿ ವಿಶ್ವಾಸ್ (22) ಬಂಧಿತ ಆರೋಪಿ.
ಫೆ.1ರಂದು ಶ್ರೀದೇವಿ ಕಾಲೇಜು ಬಳಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಲವಾರ್ ಹಿಡಿದು ಕಾಲೇಜಿಗೆ ಬಂದಿದ್ದ. ಈತ ತಲವಾರು ಹಿಡಿದಿದ್ದ ವೀಡಿಯೋ ವಿದ್ಯಾರ್ಥಿಗಳ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ.
ಆದರೆ ವೀಡಿಯೋದಲ್ಲಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಬರ್ಕೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ತಲವಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.