ಉತ್ತರಪ್ರದೇಶ:ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ(Bullets Hit AIMIM Chief Asaduddin Owaisi's Car)
Thursday, February 3, 2022
ಉತ್ತರ ಪ್ರದೇಶ ಮೀರತ್: ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.ಹೀಗಂತ ಸಂಸದ ಓವೈಸಿ ಆರೋಪಿಸಿದ್ದಾರೆ.
ಇಂದು ಸಂಜೆ ಉತ್ತರ ಪ್ರದೇಶದ ಮೀರತ್ ನಗರದಲ್ಲಿ ಈ ಘಟನೆ ನಡೆದಿದ್ದು ಸಂಸದ ಓವೈಸಿ ಹಾಗೂ ಕಾರಿನಲ್ಲಿದ್ದ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
"ಐದು ಸುತ್ತು ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಫೈರಿಂಗ್ ಆದ ಪರಿಣಾಮ ಕಾರು ಪಂಕ್ಚರ್ ಆಗಿದೆ. ಬಳಿಕ ಇನ್ನೊಂದು ಕಾರಿನ ಮೂಲಕ ಅಲ್ಲಿಂದ ಪಾರಾಗಿದ್ದಾಗಿ ಓವೈಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.