Mangalore: ಮಂಗಳಮುಖಿಯರಿಂದ 'ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ಆಯೋಜನೆ- ಯಕ್ಷಾಭಿಮಾನಿಗಳಿಂದ ಶ್ಲಾಘನೆ
Saturday, February 26, 2022
ಮಂಗಳೂರು: ಸಮಾಜದ ನಿರ್ಲಕ್ಷ್ಯಕ್ಕೊಳಪಟ್ಟ ಮಂಗಳಮುಖಿಯರು(ತೃತೀಯ ಲಿಂಗೀಯರು) ಯಕ್ಷಗಾನ ಆಯೋಜಿಸುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಐದು ಮಂದಿ ಮಂಗಳಮುಖಿಯರೇ ಸೇರಿಕೊಂಡು ಯಕ್ಷಗಾನ ಆಯೋಜಿಸಿ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಬರೆದಿದ್ದಾರೆ.
ಮಂಗಳೂರಿನ ಕೋಡಿಕಲ್ ಕಟ್ಟೆಯ ಬಳಿ ಫೆ.25ರಂದು ಈ ಕಾಲಮಿತಿ ಯಕ್ಷಗಾನ ಜರುಗಿತು. ಪಟ್ಲ ಸತೀಶ್ ಶೆಟ್ಟಿ ಮುಂದಾಳತ್ವದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿಯವರು 'ಶ್ರೀದೇವಿ ಮಹಾತ್ಮೆ' ಯಕ್ಷಗಾನ ಪ್ರದರ್ಶನ ನೀಡಿದರು.
1,500ರಷ್ಟು ಯಕ್ಷಪ್ರೇಮಿಗಳು ನೆರೆದಿದ್ದು ಅಷ್ಟೂ ಮಂದಿಗೆ ಅನ್ನದಾನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಶೋಕನಗರದ ದಂಬೇಲ್‌ನಲ್ಲಿ ವಾಸವಿರುವ ಮಂಗಳಮುಖಿಯರು ಈ ಯಕ್ಷಗಾನ ಆಯೋಜಿಸಿದ್ದಾರೆ.
ಐದು ಜನ ಮಂಗಳಮುಖಿಯರು ಸೇರಿಕೊಂಡು ಯಾವುದೇ ದೇಣಿಗೆ ಪಡೆಯದೆ, ತಾವು ಉಳಿಸಿದ ಹಣವನ್ನೇ ದೇವಿಯ ಸೇವೆಗೆ ವಿನಿಯೋಗಿಸಿದ್ದಾರೆ. ಇವರ ಮಾದರಿ ನಡೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.