ಮಂಗಳೂರು: ಒಂಬತ್ತನೇ ತರಗತಿಯ ಬಾಲಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ ; ಸಾವಿನ ಬಗ್ಗೆ ಶಂಕೆ
Monday, February 28, 2022
ಸಂಶಯಾಸ್ಪದ ರೀತಿಯಲ್ಲಿ ಬಾಲಕನೋರ್ವನ ಮೃತದೇಹ ನಗರದ ಹೊಯಿಗೆಬಜಾರ್ ಬಳಿಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಮಹಾಕಾಳಿಪಡ್ಪು ನಿವಾಸಿ ಚೆನ್ನಪ್ಪ ಅವರ ಪುತ್ರ ದೃಶ್ಯಂತ್ ಮೃತಪಟ್ಟ ಬಾಲಕ. ಪಾಂಡೇಶ್ವರದ ರೊಸಾರಿಯೋ ಸ್ಕೂಲ್ ನಲ್ಲಿ 9 ನೇ ತರಗತಿ ಕಲಿಯುತ್ತಿದ್ದ ದೃಶ್ಯಂತ್, ಭಾನುವಾರ ಶಾಲೆಗೆ ರಜೆ ಇದ್ದುದರಿಂದ ಮನೆ ಬಳಿಯ ಮೈದಾನದಲ್ಲಿ ಆಟವಾಡಲು ಹೋಗಿದ್ದಾನೆ. ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಬಳಿಕ ಆತ ನಾಪತ್ತೆಯಾಗಿದ್ದ.
ಈ ಬಗ್ಗೆ ಜೊತೆಗಿದ್ದ ಗೆಳೆಯರಲ್ಲಿ ಹೆತ್ತವರು ವಿಚಾರಿಸಿದ್ದು ತಮಗೇನೂ ಗೊತ್ತಿಲ್ಲ ಎಂದಿದ್ದರು. ಇಂದು ಬೆಳಗ್ಗೆ ತಾಯಿ ಆಶಾ ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಸಂಜೆ ವೇಳೆಗೆ ದೃಶ್ಯಂತ್ ಅದೇ ಮೃತದೇಹ ಹೊಯ್ಗೆಬಜಾರ್ ಬಳಿ ನದಿ ತೀರದಲ್ಲಿ ಪತ್ತೆಯಾಗಿದೆ.
ಸ್ನಾನಕ್ಕಿಳಿದು ಮೃತಪಟ್ಟಿದ್ದಾನೆಯೇ, ಬೇರೆ ಏನಾದರೂ ಕೈವಾಡ ಇದೆಯೇ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.