ಬೆಂಗಳೂರು:ಪುರುಷ ಮತ್ತು ಮಹಿಳೆ ನಡುವೆ ಸ್ಪರ್ಧೆ ಇರಬಾರದು ಸಹಕಾರ ಇರಬೇಕು-ಬೆಂಗಳೂರು ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ಮೆನ್ ರಶ್ಮಿ ರವಿಕಿರಣ್ ಅಭಿಮತ
Thursday, March 24, 2022
ಬಿ ಪ್ಯಾಕ್, ಬಿ ಕ್ಲಿಪ್ ಹಳೆ ವಿದ್ಯಾರ್ಥಿ ಸಂಘ ಮತ್ತು ಶ್ರೀ ಕೃಷ್ಣ ವೆಲ್ ನೆಸ್ ಯೋಗ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ಬೆಂಗಳೂರಿನ 100 ಮಹಿಳಾ ಸಾಧಕಿಯರಿಗೆ ಬೆಂಗಳೂರು ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಿಮ್ಮೆಲ್ಲರ ಸಾಧನೆ ವಿಶ್ವಕ್ಕೆಲ್ಲ ಮಾದರಿಯಾದದ್ದು. ನಿಮ್ಮೆಲ್ಲರ ಸಾಧನೆಯನ್ನು ಗುರುತಿಸಿ, ಬೆನ್ನುತಟ್ಟಿ ಪ್ರೋತ್ಸಾಹ ನೀಡುವುದರ ಜೊತೆಗೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಅತ್ಯಂತ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ ಮೆನ್ ರಶ್ಮಿ ರವಿ ಕಿರಣ್ ಅವರು, ಹೇಗೆ ಪ್ರತಿ ಪುರುಷನ ಸಾಧನೆಯಿಂದ ಮಹಿಳೆ ಇರ್ಥಳೋ ಅದೇ ರೀತಿ ಮಹಿಳೆಯ ಸಾಧನೆ ಹಿಂದೆ ಪುರುಷನ ಬೆಂಬಲ ಇರುತ್ತದೆ. ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಹೆಜ್ಜೆ ಹಾಕಬೇಕು. ಪುರುಷ ಮತ್ತು ಮಹಿಳೆ ನಡುವೆ ಸ್ಪರ್ಧೆ ಇರಬಾರದು ಸಹಕಾರ ಇರಬೇಕು. ಈಗಾಗಿದ್ದಲ್ಲಿ ಉತ್ತಮ ಮತ್ತು ಮೌಲ್ಯಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದ್ರು.
ನಮ್ಮ ಸರ್ಕಾರಗಳೂ ಮಹಿಳಾ ಸಬಳೀಕರಣಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ, ಅದರ ಸದುಪಯೋಗಪಡೆದುಕೊಂಡಾಗ ಮಾತ್ರ ನಮ್ಮ ದೇಶದ ನಾರೀಯರ ಶಕ್ತಿಯೂ ಪ್ರಭಾವಿಸುತ್ತದೆ ಎಂದು ಪ್ರತಿಪಾದಿಸಿದರು.
ಮಹಿಳೆಯರು ಸುರಕ್ಷಿತರಾಗಿ, ಸ್ವಾವಲಂಬಿಗಳಾಗಿ, ಔದ್ಯಮಿಕವಾಗಿ ಮತ್ತು ಆರ್ಥಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಮೌಲ್ಯಯುತ ಗುಣಮಟ್ಟದ ಜೀವನನಡೆಸಲು ಸಾಧ್ಯ. ಮಹಿಳೆಯರ ಕೌಶಲ್ಯಾಭಿವೃದ್ಧಿಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ, ನಿಜಕ್ಕೂ ದೇಶದ ಅಭಿವೃದ್ಧಿ ಮಾನದಂಡದಲ್ಲಿ ಮಹತ್ತರವಾದ ಬದಲಾವಣೆ ತರಲು ಸಾಧ್ಯ ಎಂದು ಹೇಳಿದ್ರು.
ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಮಹಿಳೆಯರ ಆತ್ಮಬಲ ಹಾಗೂ ದಕ್ಷತೆಯನ್ನು ವೃದ್ಧಿಸುತ್ತದೆ. ಮಹಿಳೆಯರಲ್ಲಿ ಅಪಾರವಾದ ಶಕ್ತಿಯಿದೆ. ಅವರಿಗೆ ಉತ್ತೇಜನ ನೀಡುವ ಕೆಲಸವಾಗಬೇಕಿದೆ. ಮಹಿಳೆಯರಲ್ಲಿ ಅವರಲ್ಲಿರುವ ಸಾಮಥ್ರ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ಅಗತ್ಯ ಮೂಲಭೂತ ಶಿಕ್ಷಣ, ಔದ್ಯೋಗಿಕ ಹಾಗೂ ಔದ್ಯಮಿ ಪ್ರೋತ್ಸಾಹದ ಜೊತೆಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ರಶ್ಮಿ ರವಿಕಿರಣ್ ಹೇಳಿದ್ದಾರೆ.
ಓದುವ ಹದಿಹರೆಯದ ಯುವತಿಯರಿಗೆ ಅವರ ಗುರಿಯ ಬಗ್ಗೆ ನಿಖರತೆ ಮೂಡಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಬೇಕು. ಅವರ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು. ಆಗ ಮಹಿಳೆಯೂ ಸಮಾಜಕ್ಕೆ ದೇಶಕ್ಕೆ ಮಹತ್ವದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂಬುದು ರಶ್ಮಿ ರವಿಕಿರಣ್ ಅವರ ಅಭಿಮತವಾಗಿದೆ.
ತೊಟ್ಟಿಲು ತೂಗುವ ಕೈ ದೇಶವನ್ನು ಆಳಿದ ನಿದರ್ಶನಗಳು ನಮ್ಮ ಇತಿಹಾಸದಲ್ಲಿವೆ. ಇವತ್ತಿನ ಆಧುನಿಕ ನಾರಿ ಎಲ್ಲಾ ಸಿದ್ದ ಸೂತ್ರಗಳನ್ನು ಮುರಿದು ಸಾಧನೆ ಮಾಡುತ್ತಿದ್ದಾಳೆ. ಮಹಿಳೆಗೆ ಉತ್ತೇಜನ ಮತ್ತು ಪೆÇ್ರೀತ್ಸಾಹ ಹಾಗೂ ಅವಕಾಶಗಳನ್ನು ನೀಡಬೇಕು ಎಂದು ಹೇಳಿದ್ರು.
ಬೆಂಗಳೂರು ಮಹಿಳಾ ಸಾಧಕಿಯರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ ಮೆನ್ ರಶ್ಮಿ ರವಿಕಿರಣ್, ಶಾಸಕ ರಿಝ್ವಾನ್ ಆರ್ಶದ್, ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಚಿವ ಸಂತೋಷ್ ಲಾಡ್, ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಬಿ ಪ್ಯಾಕ್ ನ ಆನಂದ್ ಬೇಗೂರು ಮೊದಲಾದವರು ಉಪಸ್ಥಿತಿರಿದ್ದರು.