ಮಂಗಳೂರು: ಬಸ್ ನಲ್ಲಿ ಯುವತಿಗೆ ಕಿರುಕುಳ: ಕಾಮುಕ ಹಾವೇರಿ ಮೂಲದ ವಾಜಿದ್ ಅರೆಸ್ಟ್ sexual harassment arrest

ಮಂಗಳೂರು: ಬಸ್ ನಲ್ಲಿ ಯುವತಿಗೆ ಕಿರುಕುಳ: ಕಾಮುಕ ಹಾವೇರಿ ಮೂಲದ ವಾಜಿದ್ ಅರೆಸ್ಟ್ sexual harassment arrest

ಮಂಗಳೂರು: ಬಸ್ ನಲ್ಲಿ ಒಂದೇ ಸೀಟ್ ನಲ್ಲಿದ್ದ ಸಹ ಪ್ರಯಾಣಿಕೆಗೆ ಕಿರುಕುಳ ನೀಡಿರುವ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ಮೂಲದ ವಾಜಿದ್ ಎ ಜಮಖಾನಿ ಬಂಧಿತ ಆರೋಪಿ. ಯುವತಿಯೋರ್ವರು ಸುಳ್ಯದಿಂದ ಮಂಗಳೂರಿಗೆ ಕೆಸ್ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಕುಳಿತಿದ್ದ ಸೀಟ್ ನಲ್ಲಿಯೇ ವಾಜಿದ್ ಎ ಜಮಖಾನಿ ಪ್ರಯಾಣಿಸುತ್ತಿದ್ದ. ಪ್ರಯಾಣದ ಮಾಡುತ್ತಿದ್ದ ಸಂದರ್ಭ ಈತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಯುವತಿ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article