ಮಂಗಳೂರು: ಎಸ್ ಡಿ ಪಿ ಐ ಕಾರ್ಯಕರ್ತರಿಂದ ಪೊಲೀಸ್ ನಿಂದನೆ ಪ್ರಕರಣ: ಬಂಧಿತರ ಸಂಖ್ಯೆ 12ಕ್ಕೆ ಏರಿಕೆ
Tuesday, May 31, 2022
ಮಂಗಳೂರಿನ ಕಣ್ಣೂರಿನಲ್ಲಿ ಶುಕ್ರವಾರ ನಡೆದ ಎಸ್ ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಸಂದರ್ಭ ಪೊಲೀಸ್ ನಿಂದನೆ ಮಾಡಿದ ಆರೋಪದಲ್ಲಿ ಮತ್ತೆ 6 ಮಂದಿಯನ್ನು ಬಂಧಿಸಲಾಗಿದೆ. ಇದೀಗ ಬಂಧಿತ ಆರೋಪಿಗಳ ಸಂಖ್ಯೆ 12ಕ್ಕೆ ಏರಿದೆ.
ಗುರುಪುರ ನಿವಾಸಿ ಸಫ್ವಾನ್ ಯಾನೆ ಫಹಾದ್(23), ಅಬ್ದುಲ್ ಸಲಾಂ(23), ಮೊಹಮ್ಮದ್ ಸಾಹಿಲ್(23), ಮೊಹಮ್ಮದ್ ಫಲಾಹ್(20), ಸೂರಲ್ಪಾಡಿ ನಿವಾಸಿ ಮೊಹಮ್ಮದ್ ಹುನೈಜ್(23), ಇನ್ನೊಳಿ ನಿವಾಸಿ ಅಬ್ದುಲ್ ಲತೀಫ್( 31) ಬಂಧಿತ ಆರೋಪಿಗಳು. ಬಂಧಿತರಿಂದ ಸ್ಕೂಟರ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್ ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಸಂದರ್ಭ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು ಪೊಲೀಸ್ ನಿಂದನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಈರ್ವರ ಸಹಿತ ಇವರಿಗೆ ಆಶ್ರಯ ನೀಡಿದ ನಾಲ್ವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಮಂದಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಸಫ್ವಾನ್ ಎಂಬಾತ ಪೊಲೀಸ್ ವಿರುದ್ಧ ಘೋಷಣೆ ಕೂಗುವುದನ್ನು ವೀಡಿಯೋ ಮಾಡಿ ವೈರಲ್ ಮಾಡಿದ್ದನು.