ಉಪ್ಪಿನಂಗಡಿ:ಹಿಜಾಬ್ ಅವಕಾಶಕ್ಕಾಗಿ ಪಟ್ಟು,ಅರು ವಿದ್ಯಾರ್ಥಿನಿಯರ ಅಮಾನತು hijab issue students suspend

ಉಪ್ಪಿನಂಗಡಿ:ಹಿಜಾಬ್ ಅವಕಾಶಕ್ಕಾಗಿ ಪಟ್ಟು,ಅರು ವಿದ್ಯಾರ್ಥಿನಿಯರ ಅಮಾನತು hijab issue students suspend

ಮಂಗಳೂರು: ನಗರದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕಳೆದ ಒಂದು ವಾರದಿಂದ ಕಾವೇರಿದ ಹಿಜಾಬ್ ವಿವಾದ ತಣ್ಣಗಾಗುವ ಮೊದಲೇ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರು ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಗೆ ಅವಕಾಶ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೀಗ ಕಾಲೇಜು ಆಡಳಿತ ಮಂಡಳಿ ಈ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಿ ಅಮಾನತು ಮಾಡಿದೆ.

ಕಾಲೇಜಿನಲ್ಲಿ  ನಡೆದ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಭೆಯಲ್ಲಿ ಈ  ನಿರ್ಧಾರ ತೆಗೆದುಕೊಂಡು ಈ ಅಮಾನತು ಮಾಡಲಾಗಿದೆ.ಉಪ್ಪಿನಂಗಡಿ ಕಾಲೇಜಿನಲ್ಲಿ ಹಲವು ದಿನಗಳ ಹಿಂದೆಯೇ  ಹಿಜಾಬ್ ವಿವಾದ ಉದ್ಭವಿಸಿತ್ತು. ಬಳಿಕ ವಿವಾದ ತಣ್ಣಗಾದರೂ ಪ್ರತಿದಿನ ಹಿಜಾಬ್ ಧರಿಸಿಯೇ 6 ಮಂದಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರ್ತಿದ್ದರು. ಹಿಜಾಬ್ ಧರಿಸಿ ಆಗಮಿಸುವುದರ ವಿರುದ್ದ ಇತರೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದ ಕಾಲೇಜಿನಲ್ಲಿ ಸಂಘರ್ಷ ಸಾಧ್ಯತೆ ಹಿನ್ನೆಲೆಯಲ್ಲಿ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article