Bangalore:ಸಮಾಜಕ್ಕೆ ಮಾದರಿಯಾಗಿದ್ದ ದಿ. ಡಾ.ಆರ್. ಎನ್. ಶೆಟ್ಟಿ:ನಿವೃತ್ತ ಲೋಕಾಯುಕ್ತ ಎಸ್. ಸಂತೋಷ್ ಹೆಗ್ಡೆ

Bangalore:ಸಮಾಜಕ್ಕೆ ಮಾದರಿಯಾಗಿದ್ದ ದಿ. ಡಾ.ಆರ್. ಎನ್. ಶೆಟ್ಟಿ:ನಿವೃತ್ತ ಲೋಕಾಯುಕ್ತ ಎಸ್. ಸಂತೋಷ್ ಹೆಗ್ಡೆ

ಸಮಾಜದಲ್ಲಿ ಸಮಾಜ ಸೇವೆ ಮಾಡಿದವರಿಗೆ ಗೌರವ ಸಿಗುವುದು ತುಂಬಾ ಕಡಿಮೆ.ಅಧಿಕಾರದಲ್ಲಿರುವವರಿಗೆ ಮತ್ತು ಅತೀ ಶ್ರೀಮಂತರಿಗೆ ಗೌರವ ಹೆಚ್ಚು. ಆದ್ರೆ ದಿ. ಡಾ. ಆರ್ ಎನ್. ಶೆಟ್ಟಿಯವರ ಸಮಾಜ ಸೇವೆಯನ್ನು ಗುರುತಿಸಿ ಅವರ ಪ್ರತಿಮೆ ಅನಾವರಣೆಗೊಳಿಸಿರುವುದು ಶ್ಲಾಘನೀಯ ಎಂದು ನಿವೃತ್ತ ಲೋಕಾಯುಕ್ತ ಎಸ್. ಸಂತೋಷ್ ಹೆಗ್ಡೆ ಹೇಳಿದ್ದಾರೆ. 

ಬೆಂಗಳೂರಿನ ಬಂಟರ ಸಂಘದ ಆವರಣದಲ್ಲಿ ದಿ. ಡಾ. ಆರ್.ಎನ್.  ಶೆಟ್ಟಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಮಾತನಾಡಿದ ಅವರು, ಆರ್.ಎನ್. ಶೆಟ್ಟಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯ.     ಹೆಚ್ಚು ಓದಿಲ್ಲದಿದ್ರೂ ತಮ್ಮ ಅನುಭವಗಳಿಂದ ಯಶಸ್ಸನ್ನು ಸಾಧಿಸಿದ್ದರು. ಜೊತೆಗೆ ದಾನ - ಧರ್ಮಗಳ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದರು.  ಅವರ ಸಾಧನೆ, ಸಮಾಜ ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಇಂತಹ ಸಮಾಜ ಸೇವಕರನ್ನು ಗುರುತಿಸುವ ಕಾರ್ಯ ಮುಂದುವರಿಸಿಕೊಂಡು ಹೊಗಬೇಕು ಎಂದು ಅವರು  ಹೇಳಿದರು.  
ಇದೇ ವೇಳೆ, ದಿ. ಡಾ. ಆರ್.ಎನ್.  ಶೆಟ್ಟಿ ಸ್ಮಾರಕ ಔದ್ಯಮಿಕ ಸಾಧಕ ಪ್ರಶಸ್ತಿಯನ್ನು ಮುಂಬೈನ  ಹೇರಂಬ ಇಂಡಸ್ಟ್ರೀಸ್ ನ ಚೇರ್ ಮೆನ್ ಸದಾಶಿವ ಕೆ.ಶೆಟ್ಟಿ ಮತ್ತು ದಿ. ಸುಶೀಲಾ ಪಿ.ಶೆಟ್ಟಿ ಸ್ಮಾರಕ  ಮಹಿಳಾ ಸಾಧಕಿ ಪ್ರಶಸ್ತಿಯನ್ನು ಕರ್ನಾಟಕ ಮಹಿಳಾ ದಕ್ಷತ ಸಮಿತಿಯ ಅಧ್ಯಕ್ಷರಾದ ಶರಣ್ಯ ಎಸ್. ಹೆಗ್ಗೆ ಅವರಿಗೆ ನೀಡಿ ಗೌರವಿಸಲಾಯಿತ್ತು. 

ಇನ್ನು ಗಿರೀಶ್ ರೈ ಬರೆದಿರುವ  ಪ್ರಜಾಪ್ರಭುತ್ವ -ಬಂಟ ಜನಪ್ರತಿನಿಧಿಗಳು ಎಂಬ ಪುಸ್ತಕವನ್ನು ನಿವೃತ್ತ ಲೋಕಾಯುಕ್ತರಾದ ಎಸ್.  ಸಂತೋಷ್ ಹೆಗ್ಡೆ ಅವರು ಬಿಡುಗಡೆಗೊಳಿಸಿದ್ರು. ಅಲ್ಲದೆ, ಕಾರ್ಯಕ್ರಮದಲ್ಲಿ ಕರಾವಳಿಯ ಬಿಸು ಪರ್ಬ (ಯುಗಾದಿ) ಆಚರಣೆಯನ್ನು ಮಾಡಲಾಯಿತ್ತು. 
 
ಕಾರ್ಯಕ್ರಮದಲ್ಲಿ ಗೌರವ ಆತಿಥಿಯಾಗಿ ಜಸ್ಟೀಸ್ ಎಸ್. ವಿಶ್ವಜಿತ್ ಶೆಟ್ಟಿ,  ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಗೌರವ ಕಾರ್ಯದರ್ಶಿ ಮಧುಕರ ಎಮ್. ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article