ಕಾಸರಗೋಡು:ಹೃದಯ ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂ. ನೆರವು ನೀಡಿದ ಕ್ಯಾಂಪ್ಕೊ

ಕಾಸರಗೋಡು:ಹೃದಯ ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂ. ನೆರವು ನೀಡಿದ ಕ್ಯಾಂಪ್ಕೊ


ಕ್ಯಾಂಪ್ಕೊ  ಬಾಯಾರು  ಶಾಖೆಯ  ಸದಸ್ಯರಾದ ಶ್ರೀ ಕಾಲೇಸ್ತೋ ಮೊಂತೆರೋ ಮೀಯಪದವು ಅವರ ಹೃದಯ ಶಸ್ತ್ರಚಿಕಿತ್ಸೆಗೆ ಕಾಂಪ್ಕೋ ನೆರವಿನ ಹಸ್ತ ನೀಡಿದೆ.

'ಕ್ಯಾಂಪ್ಕೊ ಚಿತ್ತ ಸದಸ್ಯರ ಆರೋಗ್ಯದತ್ತ' ಧೈಯವಾಕ್ಯದಂತೆ ಸಂಸ್ಥೆ ತನ್ನ ಸದಸ್ಯರ ಆರೋಗ್ಯದತ್ತ ಕಾಳಜಿ ವಹಿಸುತ್ತಿದೆ. ಈ ಯೋಜನೆಯಡಿಯಲ್ಲಿ ಕಾಲೇಸ್ತೋ ಮೊಂತೆರೋ ಮೀಯಪದವುರವರ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ವೆಚ್ಚದ ಸಹಾಯಧನ ಎರಡು ಲಕ್ಷ ರೂಪಾಯಿಯ ಮೊತ್ತದ ಚೆಕ್‌ನ್ನು ಕ್ಯಾಂಪ್ಯೂ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಬಾಲಕೃಷ್ಣ ರೈ   ಬಾನೊಟ್ಟು,  ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಬದಿಯಡ್ಕ  ವಲಯದ ಹಿರಿಯ ವ್ಯವಸ್ಥಾಪಕರಾದ ಶ್ರೀ ಗಿರೀಶ್ , ಕ್ಯಾಂಪ್ಕೊ ಬಾಯಾರು ಶಾಖಾಧಿಕಾರಿ ಕುಞಂಬು,  ಹಾಗೂ ಮೀಯಪದವು ಶಾಖಾಧಿಕಾರಿ ಈಶ್ವರ ಭಟ್ ರವರು  ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article