Mangalore: ಚಿಟ್ ಫಂಡ್ ನಲ್ಲಿ‌ 10 ಲಕ್ಷ ರೂ. ಕೊಡದೆ ವಂಚನೆ; ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು mng

Mangalore: ಚಿಟ್ ಫಂಡ್ ನಲ್ಲಿ‌ 10 ಲಕ್ಷ ರೂ. ಕೊಡದೆ ವಂಚನೆ; ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು mng


Mangalore: ನಗರದ ಸುರತ್ಕಲ್ ಸಮೀಪದ ಇಡ್ಯಾ ಎಂಬಲ್ಲಿ ಫೈನಾನ್ಸ್ ಮೂಲಕ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದ ಮೂವರು ತನಗೆ 10 ಲಕ್ಷ ರೂ.ವನ್ನು ನೀಡದೆ ವಂಚನೆ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದ ಅಶೋಕ್ ಭಟ್ , ವಿದ್ಯಾ ಹಾಗೂ ಪ್ರಿಯಾಂಕ ಭಟ್ ಎಂಬವರು ಆರೋಪಿಗಳು.

ಆರೋಪಿಗಳ ಫೈನಾನ್ಸ್‌ನ 10 ಲಕ್ಷ ರೂ. ಮೌಲ್ಯದ ಚಿಟ್‌ಫಂಡ್‌ಗೆ ತಾನು ಸೇರಿದ್ದು 2019ರ ಸೆಪ್ಟೆಂಬರ್‌ನಿಂದ ಪ್ರತೀ ತಿಂಗಳು 50 ಸಾವಿರ ರೂ. ಚಿಟ್‌ಫಂಡ್‌ಗೆ ಪಾವತಿಸಲು ತಿಳಿಸಿದ್ದರು. ಅದರಂತೆ ಆರೋಪಿಗಳು ದಿನಂಪ್ರತಿ 1,500 ರೂಪಾಯಿಯನ್ನು ತನ್ನಿಂದ ಪಡೆದುಕೊಂಡು ಹೋಗುತ್ತಿದ್ದರು. ತಿಂಗಳಿಗೊಮ್ಮೆ ಕಚೇರಿಗೆ ಹೋಗಿ ವ್ಯವಹಾರದ ಪಾಸ್ ಪುಸ್ತಕದಲ್ಲಿ ಹಣ ಕಟ್ಟಿರುವ ಬಗ್ಗೆ ನಮೂದಿಸಿ ಸಹಿ ಪಡೆದುಕೊಂಡು ಬರುತ್ತಿದ್ದೆ. 

2021 ರ ಮಾರ್ಚ್ 28 ರಂದು ಚಿಟ್ ಫಂಡ್ ಅವಧಿ ಮುಕ್ತಾಯವಾಗಿದ್ದು, ನಂತರದ ದಿನಗಳಲ್ಲಿ ಹಣ ಪಾವತಿಸುವುದಾಗಿ ಫೈನಾನ್ಸ್ ಮಾಲಕರು ತಿಳಿಸಿದ್ದರು. ಆದರೆ ಈವರೆಗೆ ಫಂಡ್ ಹಣ ನನಗೆ ನೀಡದೆ ತಪ್ಪಿಸಿಕೊಳ್ಳುತ್ತಿದ್ದಾರೆ. ನನಗೆ ಮಾತ್ರವಲ್ಲದೆ ಇತರರಿಗೂ ಸಹಿತ ಸುಮಾರು 2 ಕೋ. ರೂ.ನಷ್ಟು ಹಣ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article