Mangalore:PFI ದಾಳಿ ಮುಸ್ಲಿಂ ಸಮಾಜದ ಮೇಲಿನ ದಾಳಿಯಲ್ಲ: ಯುಟಿ ಖಾದರ್ mng
Tuesday, September 27, 2022
Mangalore: PFI ಮೇಲಿನ ದಾಳಿಯ ವಿರುದ್ಧ ರಾಜ್ಯದ, ಜಿಲ್ಲೆಗಳ ಧಾರ್ಮಿಕ ಗುರುಗಳು, ಉಲೇಮಾಗಳು, ಸಂಘಟನೆಗಳು ಯಾರೂ ಅಪಸ್ವರ ಎತ್ತಿಲ್ಲ. ಮುಸ್ಲಿಂ ಧರ್ಮದ ಸಹಿತ ಎಲ್ಲಾ ಧರ್ಮಗಳು ನ್ಯಾಯಯುತ ತನಿಖೆಗೆ ಎಲ್ಲರೂ ಬೆಂಬಲ ಕೊಡುತ್ತಾರೆ ಎಂದು ವಿಧಾನಸಭೆಯ ವಿಪಕ್ಷ ಉಪ ನಾಯಕ U.T.ಖಾದರ್ ಹೇಳಿದರು.
PFI ಸಂಘಟನೆ ಮೇಲಿನ ದಾಳಿ ಇಡೀ ಮುಸ್ಲಿಂ ಸಮುದಾಯದ ಮೇಲಿನ ದಾಳಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಸಂಘಟನೆಗಳನ್ನು ಬ್ಯಾನ್ ಮಾಡಬೇಕು, ಇನ್ನೇನು ಮಾಡಬೇಕೆಂಬುದು ತನಿಖೆಯ ಆಧಾರದಲ್ಲಿ ತಿಳಿಯುವಂತದ್ದು. ಸಮಾಜದಲ್ಲಿ ಅಶಾಂತಿ ಹುಟ್ಟುವ, ದ್ವೇಷ ಆಧಾರಿತ ಕೃತ್ಯ ನಡೆಯುತ್ತಿದ್ದರೆ ಎಲ್ಲ ಸಂಘಟನೆಗಳಿಗೆ ಸಮಾನವಾದ ಕಾನೂನು ತರಬೇಕು. ಇದರಿಂದ ದೇಶದಲ್ಲಿ ನ್ಯಾಯ, ತಾರತಮ್ಯ ರಹಿತವಾದ ಸಮಾಜ ಅಥವಾ ಆಡಳಿತಕ್ಕೆ ಎಲ್ಲರೂ ಬೆಂಬಲ ಕೊಡುತ್ತಾರೆ ಎಂದು ಖಾದರ್ ಹೇಳಿದರು.
ಸಮಾಜದಲ್ಲಿ ಅಶಾಂತಿ, ದ್ವೇಷದ ವಾತಾವರಣ, ಹಲ್ಲೆ, ಕೊಲೆಯ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೆ ಅಂತಹ ಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಎಲ್ಲರ ಸಹಮತ ಇರುತ್ತದೆ. ಆದರೆ ಶಾಂತಿ, ಸುವ್ಯವಸ್ಥೆಯ ವಾತಾವರಣ ನಿರ್ಮಾಣ ಮಾಡೋದು, ಕಾನೂನು ಕೈಗೆತ್ತಿಕೊಳ್ಳುವವರನ್ನು ಹದ್ದುಬಸ್ತಿನಲ್ಲಿಡೋದು ಸರಕಾರಗಳ ಜವಾಬ್ದಾರಿಯಾಗಿದೆ. ಅಲ್ಲದೆ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ನ್ಯಾಯ ಕೊಡುವ ಕಾರ್ಯ ಸರಕಾರದಿಂದ ಆಗಬೇಕು.ತಮ್ಮ ಕಾರ್ಯ ರಚನೆಯು ಒಂದೇ ರೀತಿಯಾಗಿದ್ದಲ್ಲಿ ಎಲ್ಲರೂ ಬೆಂಬಲ ನೀಡುತ್ತಾರೆ. ಯಾರಿಗೂ ಅನ್ಯಾಯವಾಗಬಾರದು. ನೈಜ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಲಿ, ಆದರೆ ನಿರಪರಾಧಿಗಳಿಗೆ ತೊಂದರೆಯಾಗಬಾರದು ಎಂದು UT ಖಾದರ್ ಹೇಳಿದರು.