Mangalore: ಮೂಲದ ವೈದ್ಯೆ ಪುಣೆಯಲ್ಲಿ ರಸ್ತೆ ಅಪಘಾತಕ್ಕೆ ಬಲಿ road accident death
Wednesday, September 14, 2022
ಮಂಗಳೂರು: ಮಂಗಳೂರು ಮೂಲದ ದಂತ ವೈದ್ಯೆ ಪುಣೆಯ ಪಿಂಪ್ರಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಮೂಲತಃ ಮಂಗಳೂರಿನ ವೆಲೆನ್ಸಿಯಾ ನಿವಾಸಿ, ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದ ಜಿಶಾ ಜಾನ್(27) ಮೃತಪಟ್ಟ ದುರ್ದೈವಿ.
ಜಿಶಾ ಸ್ಕೂಟರ್ ನಲ್ಲಿ ಪುಣೆಯ ಪಿಂಪ್ರಿಯಲ್ಲಿ ಮನೆ ಕಡೆಗೆ ಹೋಗುತ್ತಿದ್ದ ವೇಳೆ ಅವರು ಸಂಚರಿಸುತ್ತಿದ್ದ ಸ್ಕೂಟರ್ ಗೆ ಟ್ರಕ್ ಢಿಕ್ಕಿ ಹೊಡೆದಿದೆ.ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಜಿಶಾ ಜಾನ್ ಪತಿ ಪುಣೆಯಲ್ಲಿ ಉದ್ಯಮಿಯಾಗಿದ್ದಾರೆ.