Udupi: ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಸಾವಯವ ಕೃಷಿಕ
Wednesday, September 14, 2022
ಉಡುಪಿ : ಕಾರ್ಕಳ ತಾಲೂಕಿನ ತೆಳ್ಳಾರು ನೀಲೆಬೆಟ್ಟು ನಿವಾಸಿ,ಸಾವಯವ ಕೃಷಿಕ ಭಾಸ್ಕರ ಹೆಗ್ಡೆ (63) ಅವರು ತಮ್ಮ ಮನೆಯಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಚಹಾ ಮಾಡಲೆಂದು ಅಡುಗೆ ಕೊಠಡಿ ಪ್ರವೇಶಿದ್ದ ಸಂದರ್ಭ ಗುಂಡಿನ ಸದ್ದು ಕೇಳಿಬಂದಿದ್ದು, ಹೊರಗೆ ಬಂದು ನೋಡುವಾಗ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಮೃತರು ಸಾವಯವ ಕೃಷಿಕರಾಗಿದ್ದು, ಆತ್ಮಹತ್ಯೆಗೆ ಆರ್ಥಿಕ ಅಡಚಣೆ ಕಾರಣ ಎಂದು ಹೇಳಲಾಗುತ್ತಿದೆ. ಕಾರ್ಕಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.