Mangalore:ಮಂಗಳೂರಿಗೆ ಪ್ರಧಾನಿ ಮೋದಿ
Friday, September 2, 2022
ಕೋಮು ಗಲಭೆ ಗಳಿಂದ ಹೈರಾಣಾಗಿದ್ದ ಮಂಗಳೂರು ನಗರ ಪ್ರಧಾನಿ ಮೋದಿ ಆಗಮನದಿಂದ ಕಳೆ ಗಟ್ಟಿದಂತಾಗಿದೆ. ಇತ್ತೀಚೆಗೆ ಸತತ ಮೂರು ಕೊಲೆಗಳಿಂದ ಕೋಮು ಸೌಹಾರ್ಧತೆ ಕದಡುವಂತ ಪರಿಸ್ಥಿತಿ ಉಂಟಾಗಿತ್ತು. ರಾಜ್ಯದ ಬಿಜೆಪಿ ನಾಯಕರ ಮೇಲೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುವಂತಹಾ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಮಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಗಳಗೆ ಚಾಲನೆ ನೀಡಿದ ಮೋದಿ ಒಟ್ಟು ಮೂರು ಸಾವಿರದ ಎಂಟು ನೂರು ಕೋಟಿಗಳ ಕಾಮಗಾರಿ ಗಳಿಗೆ ಚಾಲನೆ ನೀಡಿದರು.