ಶತಾಯಿಷಿ ಅಮ್ಮನ ಪಾದ ಪೂಜೆ ಮಾಡಿದ ಪ್ರಧಾನಿ ನರೇಂದ್ರ ಮೋದಿ !
Friday, June 17, 2022
ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಜನ್ಮ ದಿನ ಇಂದು. ತಾಯಿ ಜನ್ಮದಿನದ ಅಂಗವಾಗಿಯೇ ಮೋದಿ ಪಾದ ಪೂಜೆ ಮಾಡಿ,ಶತಾಯಿಷಿ ಅಮ್ಮನ ಆಶೀರ್ವಾದವನ್ನೂ ಪಡೆಯುವ ಮೂಲಕ ಪ್ರಧಾನಿ ಮೋದಿ ಅಮ್ಮನ ಮೇಲೆ ಅಪಾರ ಗೌರವ ಮತ್ತು ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.
ಇಂದು ಗುಜರಾತ್‌ನಲ್ಲಿರೋ ಅಮ್ಮನ ಜೊತೆಗೆ ಇಡೀ ದಿನ ಕಳೆಯೋ ಯೋಜನೆ ಹಾಕಿದ್ದಾರೆ.
ಮೋದಿ ತಾಯಿಯ ಜನ್ಮದಿನಕ್ಕೆ ಇಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇಲ್ಲಿನ ಸ್ಥಳೀಯ ರಸ್ತೆಯೊಂದಕ್ಕೆ ಹೀರಾಬೆನ್ ಹೆಸರನ್ನೂ ಇಡಲಾಗುತ್ತಿದೆ.