Mangalore:ಉಗ್ರ ಸಂಪರ್ಕದ ಆರೋಪಿ ಮಾಝ್ ಮುನೀರ್ ತಂದೆ ಮುನೀರ್ ಅಹ್ಮದ್ ಹೃದಯಾಘಾತದಿಂದ ಸಾವು
Friday, September 23, 2022
ಉಗ್ರ ಸಂಘಟನೆಗಳ ಜೊತೆಗೆ ನಂಟು ಹೊಂದಿದ್ದಾನೆಂಬ ಆರೋಪದಲ್ಲಿ ಶಿವಮೊಗ್ಗದಲ್ಲಿ ಬಂಧಿತನಾಗಿದ್ದ ಆರೋಪಿ ತಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಂಕಿತ ಆರೋಪಿ ಮಾಝ್ ಮುನೀರ್ ಅಹಮದ್ ತಂದೆ ಮುನೀರ್ ಅಹ್ಮದ್ ಹೃದಯಾಘಾತದಿಂದ ಸಂಜೆ 5 ಗಂಟೆಗೆ ನಿಧನರಾಗಿರುವುದಾಗಿ ವರದಿಯಾಗಿದೆ.
ಮಗನ ಬಂಧನದಿಂದ ತೀವ್ರವಾಗಿ ನೊಂದಿದ್ದ ಮುನೀರ್ ಅಹ್ಮದ್ ರವರಿಗೆ ಇಂದು ಸಂಜೆ ಹೃದಯಾಘಾತವಾಗಿತ್ತು.
ತಕ್ಷಣ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತ ಮುನೀರ್ ಅಹ್ಮದ್ ತೀರ್ಥಹಳ್ಳಿಯ ಮಾಜಿ ಪುರಸಭಾ ಸದಸ್ಯ ಕಾಂಗ್ರೆಸ್ ಮುಖಂಡ ದಿವಂಗತ ಸಾಬ್ಬಾನ್ ಸಾಹೇಬರವರ ಪುತ್ರ.ಮುನೀರ್ ಅಹಮ್ಮದ್‌ರವರ ಮನೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಎಂಬಲ್ಲಿದ್ದರೂ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನಲ್ಲಿ ಮನೆ ಮಾಡಿ ನೆಲೆಸಿದರು ಎಂದು ತಿಳಿದುಬಂದಿದೆ.