Mangalore: ಹೃದಯಾಘಾತಕ್ಕೊಳಗಾದ ಶಂಕಿತ ಉಗ್ರನ ತಂದೆಯ ಮೃತದೇಹ ಶಿವಮೊಗ್ಗಕ್ಕೆ ರವಾನೆ
Friday, September 23, 2022
ಮಂಗಳೂರು: ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಶಂಕಿತ ಉಗ್ರ ಮಾಝ್ ನ ತಂದೆಯ ಮೃತದೇಹವನ್ನು ಸಂಬಂಧಿಕರು ಇದೀಗ ಶಿವಮೊಗ್ಗಕ್ಕೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ದರು.
ಶಂಕಿತ ಉಗ್ರನೆಂದು ಪೊಲೀಸರಿಂದ ಪುತ್ರ ಮಾಝ್ ನ ಬಂಧನದ ಬಳಿಕ ಮುನೀರ್ ಅಹಮದ್(52) ಮಾನಸಿಕವಾಗಿ ಕುಗ್ಗಿದ್ದರು. ಪರಿಣಾಮ ಇಂದು ಸಂಜೆ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಾಳೆ ಮುನೀರ್ ಮಹಮ್ಮದ್ ಅವರ ಅಂತ್ಯ ಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಮುನೀರ್ ಅಹಮದ್ ಅವರ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಸಂಬಂಧಿಗಳು ಕೊಂಡೊಯ್ದಿದ್ದಾರೆ.