ಮಂಗಳೂರು: ಬಿಜೆಪಿ ಸರಕಾರಕ್ಕೆ ತಾಕತ್ತಿದ್ದರೆ ವಕ್ಫ್ ಬೋರ್ಡ್ ಅನ್ನು ತಕ್ಷಣ ನಿಷೇಧಿಸಲಿ; ಧರ್ಮೇಂದ್ರ
Thursday, September 29, 2022
ಮಂಗಳೂರು: ಪಿಎಫ್ಐ ಸಂಘಟನೆಗೆ ವಕ್ಫ್ ಬೋರ್ಡ್ ನಿಂದ ಹಣ ಸಂದಾಯವಾಗುತ್ತಿರುವುದು ಬೇಸರದ ಸಂಗತಿ. ಬಿಜೆಪಿ ಸರಕಾರಕ್ಕೆ ತಾಕತ್ತಿದ್ದರೆ ವಕ್ಫ್ ಬೋರ್ಡ್ ಅನ್ನು ತಕ್ಷಣ ನಿಷೇಧಿಸಲಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಆಗ್ರಹಿಸಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹಣ ಪಿಎಫ್ಐಗೆ ಹರಿದು ಬರುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆ. ವಕ್ಫ್ ಬೋರ್ಡ್ ಎಸ್ ಡಿಪಿಐ, ಕಾಂಗ್ರೆಸ್ ಪಕ್ಷಗಳ ಅಧೀನದಲ್ಲಿಲ್ಲ. ಆದ್ದರಿಂದ ಬಿಜೆಪಿ ತಾಕತ್ತಿದ್ದಲ್ಲಿ ತಕ್ಷಣ ವಕ್ಫ್ ಬೋರ್ಡ್ ಅನ್ನು ನಿಷೇಧಿಸಲಿ ಎಂದರು.
ಆರ್ ಎಸ್ಎಸ್ ಬಗ್ಗೆ ಮಾತನಾಡುವ ಯಾವ ಅರ್ಹತೆಯೂ ಸಿದ್ದರಾಮಯ್ಯರಿಗಿಲ್ಲ. ಅವರು ಇದೇ ರೀತಿ ಮಾತನಾಡಿದ್ದಲ್ಲಿ ಬಹಳ ಕಷ್ಟವಾದೀತು. ಆರ್ ಎಸ್ಎಸ್ ನ ಪಾದ ಧೂಳಿಗೂ ಸಮವಲ್ಲದ, ಆರ್ ಎಸ್ಎಸ್ ನ ನಾಯಕ ಚಪ್ಪಲಿಗೆ ಸಮವಾಗಿರುವ ಸಿದ್ದರಾಮಯ್ಯರಿಗೆ ಆರ್ ಎಸ್ಎಸ್ ಬಗ್ಗೆ ಮಾತನಾಡಲು ಯಾವ ಅರ್ಹತೆಯಿದೆ. ಆರ್ ಎಸ್ಎಸ್ ಪ್ರಶ್ನಾತೀತ ಎಂದು ಧರ್ಮೇಂದ್ರ ಹೇಳಿದರು.