ಮಂಗಳೂರು: ದೇವಾಲಯ ಪ್ರವೇಶಕ್ಕೆ ಮೇಲ್ವಸ್ತ್ರ ಕಳಚುವ ವಿಚಾರದಲ್ಲಿ ಶಾಸ್ತ್ರಕ್ಕೂ ಸಮಾಜಕ್ಕೂ ವಿರೋಧ ಬಾರದಂತೆ ತೀರ್ಮಾನ ಕೈಗೊಳ್ಳಬೇಕಿದೆ; ಪೇಜಾವರ ಶ್ರೀ

ಮಂಗಳೂರು: ದೇವಾಲಯ ಪ್ರವೇಶಕ್ಕೆ ಮೇಲ್ವಸ್ತ್ರ ಕಳಚುವ ವಿಚಾರದಲ್ಲಿ ಶಾಸ್ತ್ರಕ್ಕೂ ಸಮಾಜಕ್ಕೂ ವಿರೋಧ ಬಾರದಂತೆ ತೀರ್ಮಾನ ಕೈಗೊಳ್ಳಬೇಕಿದೆ; ಪೇಜಾವರ ಶ್ರೀ


ಮಂಗಳೂರು: ದೇವರ ದರ್ಶನಕ್ಕೆ ದೇವಾಲಯದೊಳಗಡೆ ಪ್ರವೇಶಿಸುವ ವೇಳೆ ಪುರುಷರು ಮೇಲು ವಸ್ತ್ರ ಕಳಚಿಡುವ ಸಂಪ್ರದಾಯದ ವಿಚಾರದಲ್ಲಿ ನೇರ ನೇರ ಮಾತುಗಳಿಂದ ಸಾಮರಸ್ಯ ಕೆಡುವಂತೆ ಆಗಬಾರದು. ಎಲ್ಲರೂ ಒಂದಾಗಿ ಕುಳಿತು ಅಪಚಾರ ಆಗದಂತೆ ತೀರ್ಮಾನ ಕೈಗೊಳ್ಳುವುದು ಉತ್ತಮ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದರು.

ಕೊಲ್ಲೂರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮೇಲುವಸ್ತ್ರ ಕಳಚಿಟ್ಟು ಪ್ರವೇಶ ಮಾಡುವ ಸಂಪ್ರದಾಯವನ್ನು ಪ್ರಶ್ನಿಸಿ ಮಂಗಳೂರಿನ ಎನ್ಇಸಿಎಫ್ ಧಾರ್ಮಿಕ ದತ್ತಿ ಇಲಾಖೆಗೆ ಅರ್ಜಿ ಸಲ್ಲಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ದೇವಸ್ಥಾನದೊಳಗಡೆ ಪ್ರವೇಶಿಸುವ ವೇಳೆ ಹೊಲಿದ ಬಟ್ಟೆ ಹಾಕಬಾರದೆಂಬ ನಿಯಮವಿದೆ. ಹಾಗಾಗಿ ಮೇಲ್ವಸ್ತ್ರ ಕಳಚುವ ಸಂಪ್ರದಾಯ ಕೇರಳ ಹಾಗೂ ತುಳುನಾಡಿನ ಕೆಲ ದೇವಸ್ಥಾನಗಳಲ್ಲಿ ಈಗಲೂ ಇದೆ. ಆದ್ದರಿಂದ ಈ ವಿಚಾರದಲ್ಲಿ ಶಾಸ್ತ್ರಕ್ಕೂ ಸಮಾಜಕ್ಕೂ ವಿರೋಧ ಬಾರದ ಹಾಗೆ ತೀರ್ಮಾನ ಕೈಗೊಳ್ಳಬೇಕಿದೆ.

ಮೈ ತೆರೆದಿಟ್ಟು ದೇವಸ್ಥಾನ ಪ್ರವೇಶ ಮಾಡಬೇಕೆಂದು ಸಂಪ್ರದಾಯ ಹೇಳುವುದಿಲ್ಲ. ಮೇಲ್ವಸ್ತ್ರವನ್ನು ಹಾಕದೇ ಇರೋದರಿಂದ ಈ ಸಮಸ್ಯೆಯಾಗಿದೆ. ಮೇಲ್ವಸ್ತ್ರ ತೆಗೆದು ಶಲ್ಯವನ್ನು ಮೈಮುಚ್ಚುವಂತೆ ಧರಿಸಿ ದೇವಸ್ಥಾನ ಪ್ರವೇಶಿಸಲು ಯಾವ ಅಡ್ಡಿಯೂ ಇಲ್ಲ. ಆದ್ದರಿಂದ ಈ ವಿಚಾರದಲ್ಲಿ ಎಲ್ಲರೂ ಒಂದಾಗಿ ಕುಳಿತು ಯಾವುದಕ್ಕೂ ಅಪಚಾರ ಆಗದಂತೆ ತೀರ್ಮಾನ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

Ads on article

Advertise in articles 1

advertising articles 2

Advertise under the article