Mangalore: ಕಿಟಕಿ ಮುರಿದು ಹಾಸ್ಟೆಲ್ ನಿಂದ ಪರಾರಿಯಾದ ವಿದ್ಯಾರ್ಥಿನಿಯರು ಊರು ಸುತ್ತಾಡಿ ಖಾಕಿ ಕೈಗೆ ಸಿಕ್ಕಿಬಿದ್ದರು.

Mangalore: ಕಿಟಕಿ ಮುರಿದು ಹಾಸ್ಟೆಲ್ ನಿಂದ ಪರಾರಿಯಾದ ವಿದ್ಯಾರ್ಥಿನಿಯರು ಊರು ಸುತ್ತಾಡಿ ಖಾಕಿ ಕೈಗೆ ಸಿಕ್ಕಿಬಿದ್ದರು.

ಮಂಗಳೂರು: ನಗರದ ಖಾಸಗಿ ಕಾಲೇಜಿನ ಹಾಸ್ಟೆಲ್ ನ ಕಿಟಕಿ ಮುರಿದು ಪರಾರಿಯಾಗಿರುವ ಮೂವರು ವಿದ್ಯಾರ್ಥಿನಿಯರು ಕುಡ್ಲದ ಖಾಕಿ ಪಡೆ ಪತ್ತೆಹಚ್ಚಿದೆ. ಅಷ್ಟಕ್ಕೂ ಈ ವಿದ್ಯಾರ್ಥಿಯರು ಪರಾರಿಯಾಗಿರೋದು ಯಾಕೆಂದು ಗೊತ್ತಾದರೆ ಎಲ್ಲರೂ ಆಶ್ಚರ್ಯರಾಗೋದು ಖಚಿತ...!

ಸೆ.21ರಂದು ನಸುಕಿನ ವೇಳೆ 3.09ಕ್ಕೆ ನಗರದ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನ ಹಾಸ್ಟೆಲ್ ನಿಂದ ಯಶಸ್ವಿನಿ, ದಕ್ಷತಾ, ಸಿಂಚನಾ ಎಂಬ ಮೂವರು  ವಿದ್ಯಾರ್ಥಿನಿಯರು ಪರಾರಿಯಾಗಿದ್ದರು. ತಮ್ಮ ಲಗೇಜು ಸಹಿತ ಹಾಸ್ಟೆಲ್ ಕಿಟಕಿ ಮುರಿದು ಇವರು ಪರಾರಿಯಾಗಿರೋದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಆದರೆ ಆ ಬಳಿಕ ಈ ವಿದ್ಯಾರ್ಥಿನಿಯರು ಎಲ್ಲಿ ಹೋಗಿದ್ದಾರೆಂಬ ಸುಳಿವು ಪತ್ತೆಯಾಗಿರಲಿಲ್ಲ. 

ಇದೀಗ ಮಂಗಳೂರು ಪೊಲೀಸರ ಪ್ರಯತ್ನದಿಂದ ಮೂವರು ವಿದ್ಯಾರ್ಥಿನಿಯರು ಚೆನೈನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನಿಂದ ರೈಲಿನ ಮೂಲಕ ಕೊಯಂಬತ್ತೂರು ತೆರಳಿದ್ದ ವಿದ್ಯಾರ್ಥಿನಿಯರು ಅಲ್ಲಿಂದ ಬಸ್ ನಲ್ಲಿ ಪಾಂಡಿಚೇರಿಗೆ ಪ್ರಯಾಣಿಸಿದ್ದಾರೆ. ಅಲ್ಲಿಂದ ವಾಪಾಸ್ ಪಾಂಡಿಚೇರಿಯಿಂದ ಚೆನೈಗೆ ಬಂದಿದ್ದಾರೆ‌. ಇವರು ತಮ್ಮ ಪ್ರಥಮ ಪಿಯುಸಿಯ ಯುನಿಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿರುವುದರಿಂದ ಮನನೊಂದು, ತಮ್ಮ ಶೈಕ್ಷಣಿಕ ಒತ್ತಡವನ್ನು ನಿರ್ವಹಿಸಲಾಗದೆ ಹಾಸ್ಟೆಲ್ ನಿಂದ ಓಡಿಹೋಗಿದ್ದಾರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾತ್ರಿ ವೇಳೆ ಎಲ್ಲೂ ತಂಗಲು ಆಗದ ವಿದ್ಯಾರ್ಥಿನಿಯರು ಸಂಚಾರದಲ್ಲಿಯೇ ಇದ್ದರು. ಆದರೆ ಎಲ್ಲಿಗೂ ಹೋಗಲು ತಿಳಿಯದೆ ಓರ್ವ ವಿದ್ಯಾರ್ಥಿನಿಯ ಸಂಬಂಧಿಕರ ಮನೆಗೆ ಹೋಗಿದ್ದಾರೆ‌. ಅವರು ಸಮೀಪದ ಪೊಲೀಸ್ ಠಾಣೆಗೆ ಕರೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಮಂಗಳೂರು ಪೊಲೀಸರು ಅವರನ್ನು ಕರೆ ತಂದಿದ್ದಾರೆ‌. ಈ ಮೂಲಕ ಯಾವುದೇ ತೊಂದರೆಯಿಲ್ಲದೆ ಮತ್ತೆ ಮನೆಯವರನ್ನು ಸೇರಿರುವ ವಿದ್ಯಾರ್ಥಿನಿಯರ ಪರಾರಿ ಪ್ರಹಸನ ಸುಖಾಂತ್ಯಗೊಂಡಿದೆ. 


Ads on article

Advertise in articles 1

advertising articles 2

Advertise under the article