ಮಂಗಳೂರು: ಮುಲ್ಲಕಾಡು ಶಾಲೆಯಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಮತ್ತು ಮಾತೃವಂದನಾ ಸಪ್ತಾಹ
Tuesday, September 20, 2022
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ,ಕಾವೂರು 18 ನೇ ವಾರ್ಡಿನ ಅಂಗನವಾಡಿ ಕೇಂದ್ರ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಮತ್ತು ಮಾತೃವಂದನಾ ಸಪ್ತಾಹವು ಮುಲ್ಲಕಾಡು ಸರಕಾರಿ ಶಾಲೆಯಲ್ಲಿ ನಡೆಯಿತು.
ಮಹಾನಗರ ಪಾಲಿಕೆ ಸದಸ್ಯೆ ಗಾಯತ್ರಿ ಎ.ರಾವ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪೌಷ್ಠಿಕ ಆಹಾರ ಸೇವನೆ ಉತ್ತಮ ಆರೋಗ್ಯದ ಮೂಲ.ಪೋಷಣಾ ಅಭಿಯಾನದಲ್ಲಿ ಸಮುದಾಯದ ಆರೋಗ್ಯದ ಕಾಳಜಿ ವಹಿಸಲು ವಿಶೇಷ ಒತ್ತು ನೀಡಿರುವುದು ಉತ್ತಮ ವಿಚಾರವಾಗಿದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ಸಾಕು ಪೋಷಣಾ ಮಾಸಾಚರಣೆ ಹಾಗೂ ಮಾತೃವಂದನ ಸಪ್ತಾಹದ ಬಗ್ಗೆ ಮಾಹಿತಿ ನೀಡಿದರು.ಡಾ ವಿರಾಜ್ ಸುವರ್ಣ, ಫ್ರೌಢ ಶಾಲಾ ಶಿಕ್ಷಕಿ ಮೀರಾ ಎನ್,ಪ್ರಾಥಮಿಕ ಶಾಲಾ ಶಿಕ್ಷಕಿ ವೀಣಾ,ಸಾವಯವ ಕೃಷಿ ಬಳಗ ಸದಸ್ಯ ಗಣೇಶ್ ಚೇತನ್,ಸಮುದಾಯ ಪ್ರತಿನಿಧಿ ಸಂದೇಶ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಯರ ಸಂಘ ಮಂಗಳೂರು ನಗರದ ಅಧ್ಯಕ್ಷೆ ಆಶಾಲತ ಮುಖ್ಯ ಅತಿಥಿಗಳಾಗಿದ್ದರು.ಕದ್ರಿ ವಲಯದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು,ಸ್ತ್ರೀ ಶಕ್ತಿ ಸಂಘದ ಸದಸ್ಯರು,ಆಶಾ ಕಾರ್ಯಕರ್ತೆ, ಆರೋಗ್ಯ ಸಹಾಯಕಿ ಉಪಸ್ಥಿತರಿದ್ದರು.
ಪೌಷ್ಠಿಕ ಆಹಾರ ಪ್ರದರ್ಶನದಲ್ಲಿ ಉತ್ತಮ ಆಹಾರ ತಯಾರಿಸಿದವರಿಗೆ ಬಹುಮಾನ ವಿತರಿಸಲಾಯಿತು.ತರಕಾರಿ, ಸೊಪ್ಪು ಧಾನ್ಯಗಳ ಪ್ರದರ್ಶನ,ಹೂಗಳಿಂದ ರಚಿಸಿದ ರಂಗೋಲಿ ಗಮನ ಸೆಳೆಯಿತು.ಶೈಲಜಾ ಸ್ವಾಗತಿಸಿ,ಭವಾನಿ ವಂದಿಸಿದರು.ದೇವಿಕಾ ಕಾರ್ಯಕ್ರಮ ನಿರೂಪಿಸಿದರು.