ಚೆನ್ನೈ: ತಿರುಪತಿ ತಿಮ್ಮಪ್ಪನಿಗೆ ಒಂದು ಕೋಟಿ ದೇಣಿಗೆ ನೀಡಿದ ಮುಸ್ಲಿಂ ಉದ್ಯಮಿ

ಚೆನ್ನೈ: ತಿರುಪತಿ ತಿಮ್ಮಪ್ಪನಿಗೆ ಒಂದು ಕೋಟಿ ದೇಣಿಗೆ ನೀಡಿದ ಮುಸ್ಲಿಂ ಉದ್ಯಮಿ

ಚೆನ್ನೈ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಚೆನ್ನೈ  ಮೂಲದ ಮುಸ್ಲಿಂ ದಂಪತಿ ಒಂದು ಕೋಟಿ  ಎರಡು ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. 
ತಿರುಪತಿ ವೆಂಕಟೇಶ್ವರ ದೇವರ ಭಕ್ತರಾಗಿರುವ ಚೆನ್ನೈ ಮೂಲದ ಉದ್ಯಮಿ,ಅಬ್ದುಲ್ ಘನಿ ಮತ್ತು ಸುಬೀನಾ ಬಾನು ದಂಪತಿ ಈ ದೇಣಿಗೆಯನ್ನು ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ನೀಡಿದರು. 

ತಿರುಪತಿಯಲ್ಲಿ ನೂತನವಾಗಿ ನಿರ್ಮಾಣವಾದ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ಪೀಠೋಪಕರಣಕ್ಕೆ 87 ಲಕ್ಷ ರೂ. ಮತ್ತು ಎಸ್‍ವಿ ಅನ್ನ ಪ್ರಸಾದ ಟ್ರಸ್ಟ್‌ಗೆ 15 ಲಕ್ಷ ರೂ. ಸೇರಿ ಒಟ್ಟು ಒಂದು ಕೋಟಿ ಎರಡು ಲಕ್ಷ ರೂ ದೇಣಿಗೆ ನೀಡಿದ್ದಾರೆ.

 2020ರಲ್ಲಿ ಕೊರೊನಾ ಸಂದರ್ಭದಲ್ಲಿ ದೇವಾಲಯದ ಪರಿಸರದಲ್ಲಿ ಸೋಂಕುನಿವಾರಕಗಳನ್ನು ಸಿಂಪಡಿಸಲು ಟ್ರಾಕ್ಟರ್-ಮೌಂಟೆಡ್ ಸ್ಪ್ರೇಯರ್  ಕೊಡುಗೆ  ನೀಡಿದ್ದರು. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತರಕಾರಿ ಸಾಗಿಸಲು ರೂ.35 ಲಕ್ಷದ ಮೌಲ್ಯದ  ರೆಫ್ರಿಜರೇಟರ್ ಹೊಂದಿದ  ಟ್ರಕ್  ನೀಡಿದ್ದರು.

Ads on article

Advertise in articles 1

advertising articles 2

Advertise under the article