ಮಂಗಳೂರಿನಲ್ಲಿ ಉಗ್ರ ಪರ ಗೋಡೆ ಬರಹ ಪ್ರಕರಣದ ಅರೋಪಿಗಳಿಗೆ ಐಸಿಸ್ ನಂಟು ಖಾತ್ರಿ:ಶಿವಮೊಗ್ಗ ಪೊಲೀಸರಿಂದ ಮೂವರ ಬಂಧನ
Tuesday, September 20, 2022
ನಿಷೇಧಿತ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಮಂಗಳೂರು ಮೂಲದ ಒಬ್ಬನ ಸಹಿತ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೋಲಿಸರು ಬಂಧಿಸಿದ್ದಾರೆ.ಬಂಧಿತರರನ್ನು ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ (22 ವರ್ಷ) ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿ ಸಯ್ಯದ್ ಯಾಸೀನ್ ಯಾನೆ ಬೈಲು (21 ವರ್ಷ) ಎಂದು ಗುರುತಿಸಲಾಗಿದೆ. ಈ ಪೈಕಿ ಮಾಜ್ ಮುನೀರ್ ಅಹಮ್ಮದ್ ಎಂಬಾತ ಮಂಗಳೂರಿನಲ್ಲಿ ಐಸಿಸ್ ಪರ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದಾನೆ.
ನಿಷೇಧಿತ ಉಗ್ರ ಸಂಘಟನೆಯ ನೇರ ನಂಟು ಹೊಂದಿದ್ದ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರೀಕ್, ಮತ್ತು ಆತನ ಸಹಚರರಾದ ಮಾಜ್ ಮುನೀರ್ ಅಹಮ್ಮದ್ ಹಾಗೂ ಸಯ್ಯದ್ ಯಾಸೀನ್ ರಾಜ್ಯದಲ್ಲಿ ಸೇರಿಕೊಂಡು ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿರುವುದಾಗಿ ಆರೋಪಿಸಲಾಗಿದೆ.
ಈ ಮೂವರು ಆರೋಪಿಗಳ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 1967 ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿ ನಂತರ ಒಂಭತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.