ಬೆಂಗಳೂರು: ಖ್ಯಾತ ನಟಿ ವಿನಯಪ್ರಸಾದ್ ಮನೆಗೆ ಕನ್ನ ; ಬೀಗ ಒಡೆದು ನಗದು ದೋಚಿದ ಕಳ್ಳರು

ಬೆಂಗಳೂರು: ಖ್ಯಾತ ನಟಿ ವಿನಯಪ್ರಸಾದ್ ಮನೆಗೆ ಕನ್ನ ; ಬೀಗ ಒಡೆದು ನಗದು ದೋಚಿದ ಕಳ್ಳರು

ಬೆಂಗಳೂರು, ಅ.30: ಖ್ಯಾತ ನಟಿ ವಿನಯಪ್ರಸಾದ್‌ ಮನೆಯ ಬೀಗ ಒಡೆದು ನುಗ್ಗಿದ ಕಳ್ಳರು ಬೆಡ್‌ರೂಮ್‌ನಲ್ಲಿದ್ದ 7 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ವಿನಯಪ್ರಸಾದ್ ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿನಯಪ್ರಸಾದ್ ಮತ್ತು ಪತಿ ಜ್ಯೋತಿಪ್ರಕಾಶ್ ಹತ್ರಿ ಅವರು ಅ.22ರಂದು ತಮ್ಮ ಸ್ವಂತ ಊರಾದ ಉಡುಪಿಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಅ.26ರಂದು ಸಂಜೆ 4.30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿತ್ತು.

ಮನೆಯ ಮುಂಬಾಗಿಲಿನ ಬೀಗ ಒಡೆದು ಒಳಗೆ ಹೊಕ್ಕಿದ್ದ ಕಳ್ಳರು, ಬೆಡ್‌ರೂಮ್‌ನಲ್ಲಿದ್ದ 7 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಟಿ ವಿನಯಪ್ರಸಾದ್ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article