ಮಂಗಳೂರು: ಕನ್ನಡ ಸಮಗ್ರ ವಿಧೇಯಕ ಡಿಸೆಂಬರ್ ನಲ್ಲಿ ಮಂಜೂರಾತಿಗೆ ರಾಜ್ಯ ಸರಕಾರ ಚಿಂತನೆ mng

ಮಂಗಳೂರು: ಕನ್ನಡ ಸಮಗ್ರ ವಿಧೇಯಕ ಡಿಸೆಂಬರ್ ನಲ್ಲಿ ಮಂಜೂರಾತಿಗೆ ರಾಜ್ಯ ಸರಕಾರ ಚಿಂತನೆ mng


ಮಂಗಳೂರು: ಆಡಳಿತ ಭಾಷೆಯಲ್ಲಿ ಕನ್ನಡ ನಿರ್ಮಾಣ ಮಾಡಲು ಕನ್ನಡ ಸಮಗ್ರ ವಿಧೇಯಕವನ್ನು ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. ಈ ವಿಧೇಯಕವನ್ನು ಡಿಸೆಂಬರ್ ನಲ್ಲಿ ಮಂಜೂರಾತಿ ಮಾಡುವ ಚಿಂತನೆ ರಾಜ್ಯ ಸರಕಾರದ ಮುಂದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಹೇಳಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಮೂಲಕ ಕನ್ನಡವನ್ನು ನ್ಯಾಯಾಲಯದಲ್ಲಿ ಕನ್ನಡ, ಸುತ್ತೋಲೆಗಳಲ್ಲಿ ಕನ್ನಡ, ಉದ್ಯೋಗಗಳಲ್ಲಿ ಕನ್ನಡಿಗರಿಗೆ ಅವಕಾಶ ಮತ್ತಿತರ ಆಯಾಮಗಳಲ್ಲಿ ಈ ವಿಧೇಯಕವನ್ನು ಜಾರಿಗೊಳಿಸುವ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎಂದರು.

ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ವಿವೇಕ ಶಾಲಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಜಿಲ್ಲೆಗೆ 275 ತರಗತಿ ಕೊಠಡಿಗಳ ನಿರ್ಮಾಣಕ್ಕೆ 39.30 ಕೋಟಿ ರೂ.ಗೆ ಅನುಮೋದನೆ ‌ನೀಡಲಾಗಿದೆ. ಶೌಚಾಲಯ ನಿರ್ಮಾಣಕ್ಕೆ 5ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ. ಅಮೃತ ಶಾಲೆ ಯೋಜನೆಯಡಿ 27 ಸರಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ 270 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿಗೆ 23 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಗಡಿನಾಡ ಕವಿ ಕೈಯಾರ ಕಿಂಞಣ್ಣ ರೈಯವರ ಸ್ಮಾರಕ ಅಭಿವೃದ್ಧಿಗೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು.

Ads on article

Advertise in articles 1

advertising articles 2

Advertise under the article