Mangalore: ಖಗೋಲ ಕೌತುಕ ಸೂರ್ಯಗ್ರಹಣಕ್ಕೆ ಸಾಕ್ಷಿಯಾಯಿತು ಪಣಂಬೂರು ಕಡಲ ಕಿನಾರೆ
Tuesday, October 25, 2022
ಮಂಗಳೂರು: ಬರೋಬ್ಬರಿ 27 ವರ್ಷಗಳ ಬಳಿಕ ದೀಪಾವಳಿಯಂದೇ ಸೂರ್ಯಗ್ರಹಣ ಘಟಿಸಿದೆ. ಸೂರ್ಯಗ್ರಹಣದ ವೇಳೆಯ ಖಗೋಲ ಕೌತುಕದ ವೀಕ್ಷಣೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ಪಣಂಬೂರು ಕಡಲ ಕಿನಾರೆಯಲ್ಲಿ ವ್ಯವಸ್ಥೆ ಮಾಡಿತ್ತು.
ಸೂರ್ಯಗ್ರಹಣವನ್ನು ಬರಿಗಣ್ಣಿಂದ ನೋಡಬಾರದು. ಆದ್ದರಿಂದ ಗ್ರಹಣ ವೀಕ್ಷಣೆಗೆ ಸೌರ ಕನ್ನಡಕ, ಪಿನ್ ಹೋಲ್ ಪ್ರಾಜೆಕ್ಟ್ ಹಾಗೂ ಸೋಲಾರ್ ಫಿಲ್ಟರ್ ಅಳವಡಿಕೆ ಆಗಿರುವ ದೂರದರ್ಶಕಗಳ ಮೂಲಕ ಸುರಕ್ಷಿತವಾಗಿ ವೀಕ್ಷಕರಿಗೆ ಕಣ್ತುಂಬಿಕೊಳ್ಳಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ವ್ಯವಸ್ಥೆ ಕಲ್ಪಿಸಿದೆ.
ಇಂದು ಕೇವಲ ಸೂರ್ಯಾಸ್ತವಾಗುತ್ತಿಲ್ಲ. ಗ್ರಹಣ ಹೊಂದಿದ ಸೂರ್ಯ ಅಸ್ತವಾಗುತ್ತಿದ್ದಾನೆ. ಇದು ಬದುಕಿನಲ್ಲಿ ಒಂದು ಸಲ ಕಾಣಬಹುದಾದ ಒಂದು ಘಟನೆ. ಈ ಅಪರೂಪದ ಘಟನೆಗೆ ಪಣಂಬೂರು ಬೀಚ್ ಗೆ ಆಗಮಿಸಿರುವ ಸಮುದ್ರ ವಿಹಾರಿಗಳು ಸಾಕ್ಷಿಯಾದರು. ಅಬಾಲ ವೃದ್ಧರಾದಿಯಾಗಿ ಎಲ್ಲರೂ ಕುತೂಹಲಿಗಳಾಗಿ ಈ ಕೌತುಕವನ್ನು ವೀಕ್ಷಿಸಿದರು.
Video