ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಹಿಂದೂ ಯುವತಿಗೆ ವಂಚಿಸಲೆತ್ನಿಸಿದ ಅನ್ಯಕೋಮಿನ ಯುವಕನ ಮೇಲೆ ಕ್ರಮಕ್ಕೆ ಆಗ್ರಹ
Wednesday, October 26, 2022
ಮಂಗಳೂರು: ನಕಲಿ ಆಧಾರ್ ದಾಖಲೆಯನ್ನು ಸೃಷ್ಟಿಸಿ ಹಿಂದೂ ಯುವತಿಗೆ ವಂಚಿಸಿ ಆಕೆಯೊಂದಿಗೆ ಪರಾರಿಯಾಗಲೆತ್ನಿಸಿರುವ ಮುಸ್ಲಿಂ ಯುವಕನ ಮೇಲೆ ಕ್ರಮಕ್ಕೆ ಆಗ್ರಹಿಸಿ ದುರ್ಗಾವಾಹಿನಿ ತಂಡ ಡಿಸಿಪಿ ಅನ್ಶು ಕುಮಾರ್ ಅವರಿಗೆ ಮನವಿ ಮಾಡಿದೆ.
ಮಂಗಳೂರು ನಗರದ ಬಿ.ಸಿ.ರೋಡ್ ನಿವಾಸಿ ಇರ್ಫಾನ್ ಎಂಬಾತ ತಾನು ಹಿಂದೂ ಎಂದು ನಕಲಿ ಆಧಾರ್ ದಾಖಲೆಯನ್ನು ಸೃಷ್ಟಿಸಿ ಚಿಕ್ಕಮಗಳೂರು ಕಳಸ ಮೂಲದ ಹಿಂದೂ ಯುವತಿಗೆ ವಂಚನೆಗೈದಿದ್ದಾನೆ. ಅಲ್ಲದೆ ಅ.21ರಂದು ಆಕೆಯೊಂದಿಗೆ ಬೆಂಗಳೂರಿಗೆ ಪರಾರಿಯಾಗಲೆತ್ನಿಸುತ್ತಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಕಂಕನಾಡಿ ಠಾಣಾ ಪೊಲೀಸರಿಗೊಪ್ಪಿಸಿದ್ದಾರೆ.
ಇದೊಂದು ಆತಂಕಕಾರಿ ಘಟನೆಯಾಗಿದ್ದು, ಈತನ ವಿರುದ್ಧ ಲವ್ ಜಿಹಾದ್ ಹಾಗೂ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಜೊತೆಗೆ ಈ ಲವ್ ಜಿಹಾದ್ ಗೆ ನೆರವು ನೀಡುತ್ತಿರುವ ನಿಷೇಧಿತ ಪಿಎಫ್ಐ ಸಂಘಟನೆಯ ಶಾಹಿನ್ ಗ್ಯಾಂಗ್ ಮುಸ್ಲಿಂ ಮಹಿಳಾ ತಂಡದ ಬಗ್ಗೆ ವಿಶೇಷ ತನಿಖೆ ನಡೆಸಲು ವಿಶ್ವ ಹಿಂದೂ ಪರಿಷತ್ ದುರ್ಗಾವಾಹಿನಿ ಮಂಗಳೂರು ನಗರ ಡಿಸಿಪಿ ಅನ್ಶು ಕುಮಾರ್ ಅವರಿಗೆ ಮನವಿ ಮಾಡಿದೆ.