ಮಂಗಳೂರು: ಬೆಳ್ಳಂಬೆಳಗ್ಗೆ ಪಿಎಫ್ ಐ ಮತ್ತು ಎಸ್ಟಿಪಿಐ ಮುಖಂಡರ ಮನೆಗಳಿಗೆ ಪೊಲೀಸ್ ದಾಳಿ;ಏಳು ಮಂದಿ ವಶಕ್ಕೆ

ಮಂಗಳೂರು: ಬೆಳ್ಳಂಬೆಳಗ್ಗೆ ಪಿಎಫ್ ಐ ಮತ್ತು ಎಸ್ಟಿಪಿಐ ಮುಖಂಡರ ಮನೆಗಳಿಗೆ ಪೊಲೀಸ್ ದಾಳಿ;ಏಳು ಮಂದಿ ವಶಕ್ಕೆ

ಮಂಗಳೂರು: ಪಿಎಫ್ ಐ ಮತ್ತು ಎಸ್ಟಿಪಿಐ ಮುಖಂಡರ ಮನೆಗಳಿಗೆ ಮಂಗಳೂರು ಪೊಲೀಸರು ಇಂದು ನಸುಕಿನ ವೇಳೆ ದಾಳಿ ನಡೆಸಿದ್ದಾರೆ. ಪಣಂಬೂರು, ಉಳ್ಳಾಲ, ಬಜಪೆ ಠಾಣೆ ವ್ಯಾಪ್ತಿಯ ಒಂಭತ್ತು ಕಡೆ ಪೊಲೀಸ್ ದಾಳಿ ನಡೆದಿದ್ದು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಎಸ್ಟಿಪಿಐ ಜಿಲ್ಲಾಧ್ಯಕ್ಷ ಅಬುಬಕ್ಕರ್ ಕುಳಾಯಿ ಮನೆಯಲ್ಲೂ ಪೊಲೀಸರು ಶೋಧ ನಡೆಸಿದ್ದಾರೆ. ವಿಶೇಷ ತಂಡಗಳನ್ನು ರಚಿಸಿ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. 7 ಮಂದಿ ಪಿ ಎಫ್ ಐ ಮುಖಂಡರನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಸೆ.27ರಂದು ದಾಳಿ ನಡೆಸಿದ್ದ ವೇಳೆ 26 ಮಂದಿಯನ್ನು ವಶಕ್ಕೆ ಪಡೆಯಲು ಪೊಲೀಸರು ಪಟ್ಟಿ ಮಾಡಿಕೊಂಡಿದ್ದರು. ಆ ಪೈಕಿ 12 ಮಂದಿ ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ. ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ರಫೀಕ್ ಜೋಕಟ್ಟೆ, ಮೊಹಮ್ಮದ್‌ ಬಿಲಾಲ್ ಕಸಬಾ ಬೆಂಗ್ರೆ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಉಳ್ಳಾಲ ಠಾಣೆ ಪೊಲೀಸರು ಮೊಹಮ್ಮದ್ ರಫೀಕ್, ಅಬ್ಬಾಸ್ ಕಿನ್ಯಾ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಕಂಕನಾಡಿ ಗ್ರಾಮಾಂತರ ಪೊಲೀಸರು ಅಕ್ಬರ್ ಸಿದ್ದಿಕ್ ನನ್ನು ಅಡ್ಯಾರಿನಿಂದ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Ads on article

Advertise in articles 1

advertising articles 2

Advertise under the article