ಮಂಗಳೂರು: ವಸ್ತ್ರ ಮಳಿಗೆಯಲ್ಲಿ ಕೈಚಳಕ ತೋರಿಸಿದ ಬುರ್ಖಾಧಾರಿ ಮಹಿಳೆಯ ವೀಡಿಯೋ ವೈರಲ್

ಮಂಗಳೂರು: ವಸ್ತ್ರ ಮಳಿಗೆಯಲ್ಲಿ ಕೈಚಳಕ ತೋರಿಸಿದ ಬುರ್ಖಾಧಾರಿ ಮಹಿಳೆಯ ವೀಡಿಯೋ ವೈರಲ್


ಮಂಗಳೂರು: ವಸ್ತ್ರ ಮಳಿಗೆಯಲ್ಲಿ ಕೈಚಳಕ ತೋರಿಸಿರುವ ಮಹಿಳೆಯ ವೀಡಿಯೋವೊಂದು ವೈರಲ್ ಆಗಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾವೂರಿನ ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ನಲ್ಲಿರುವ ಸಂಧ್ಯಾ ಟೆಕ್ಸ್ ಟೈಲ್ ಗೆ ಬಂದಿರುವ ಬುರ್ಖಾಧಾರಿ ಮಹಿಳೆ ಬಟ್ಟೆ ಕೊಳ್ಳುವಂತೆ ವಸ್ತ್ರಗಳನ್ನು ನೋಡುತ್ತಾಳೆ. ಬಳಿಕ ಹ್ಯಾಂಗರ್  ನೊಂದಿಗೆ ಸಲ್ವಾರ್ ಒಂದನ್ನು ವಸ್ತ್ರ ಮಳಿಗೆ ಸಿಬ್ಬಂದಿ ಇರದೆಡೆಗೆ ಬಂದ ಆಕೆ ಬಟ್ಟೆ ನೋಡುತ್ತಿರುವಂತೆ ನಟಿಸುತ್ತಾ ಅಲ್ಲಿಯೇ ಇದ್ದ ಮೂರ್ನಾಲ್ಕು ಸೀರೆಯ ಕಟ್ಟೊಂದನ್ನು ಬುರ್ಖಾದೊಳಗೆ ಬಚ್ಚಿಡುತ್ತಾಳೆ. ಬಳಿಕ ಏನೂ ಆಗದವಳಂತೆ ಸಿಬ್ಬಂದಿಯೊಂದಿಗೆ ವ್ಯವಹಾರಿಸಿದ್ದಾಳೆ.
ಆದರೆ ಈ ದೃಶ್ಯವೆಲ್ಲಾ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ಬಳಿಕ ವಸ್ತ್ರಮಳಿಗೆಯವರು ಈ ದೃಶ್ಯವನ್ನು ನೋಡಿ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Ads on article

Advertise in articles 1

advertising articles 2

Advertise under the article