ಬೆಳ್ತಂಗಡಿ: ಗನ್ ಮ್ಯಾನ್ ವಾಪಸ್ ಮಾಡಿದ ಶಾಸಕ ಹರೀಶ್ ಪೂಂಜಾ
Saturday, October 15, 2022
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಕಾರಿನ ಮೇಲೆ ದಾಳಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಎಸ್ಪಿ ಋಷಿಕೇಶ್ ಸೋನಾವಣೆ ಸ್ಪಷ್ಟನೆ ನೀಡಿರುವ ಹಿನ್ನಲೆಯಲ್ಲಿ ಸರ್ಕಾರದಿಂದ ಕಳುಹಿಸಿರುವ ಗನ್ ಮ್ಯಾನ್ ಅನ್ನು ಶಾಸಕ ಹರೀಶ್ ಪೂಂಜಾ ವಾಪಸ್ ಕಳುಹಿಸಿದ್ದಾರೆ.
ಅ.13ರಂದು ರಾತ್ರಿ 11ಗಂಟೆ ಸುಮಾರಿಗೆ ಫರಂಗಿಪೇಟೆ ಬಳಿ ಶಾಸಕ ಹರೀಶ್ ಪೂಂಜಾ ಸಂಚಾರಿಸುತ್ತಿದ್ದ ಕಾರು ಮೇಲೆ ಸ್ಕಾರ್ಫಿಯೊ ಕಾರಿನಲ್ಲಿ ಬಂದಾತ ತಲವಾರು ಝಳಪಿಸಿ ದಾಳಿಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ಗೃಹ ಸಚಿವರ ಸೂಚನೆಯ ಮೇರೆಗೆ ಹರೀಶ್ ಪೂಂಜಾಗೆ ಗನ್ ಮ್ಯಾನ್ ಅನ್ನು ದ.ಕ ಪೊಲೀಸರು ನೀಡಿದ್ದರು.
ಆದರೆ ಇದು ಕೊಲೆ ಯತ್ನ ಅಲ್ಲ. ಕೇವಲ ಓವರ್ ಟೇಕ್ ವಿಚಾರದಲ್ಲಿ ನಡೆದಿರುವ ಪ್ರಕರಣ ಎಂದು ದ.ಕ ಎಸ್ಪಿ ಸ್ಪಷ್ಟನೆ ನೀಡಿದ್ದರು. ಎಸ್ಪಿ ಸ್ಪಷ್ಟನೆ ಹಿನ್ನಲೆಯಲ್ಲಿ ಸರ್ಕಾರದಿಂದ ನೀಡಿದ್ದ ಗನ್ ಮ್ಯಾನ್ ನನ್ನು ಶಾಸಕ ಹರೀಶ್ ಪೂಂಜಾ ವಾಪಸ್ ಕಳುಹಿಸಿದ್ದಾರೆ.