ರಾಜೀವ್ ಗಾಂಧಿ ಹತ್ಯೆಗೈದ 6 ಅಪರಾಧಿಗಳಿಗೆ ಬಿಡುಗಡೆ ಭಾಗ್ಯ ಹಂತಕರಿಗೆ ವರವಾದ ಪ್ರಿಯಾಂಕಾ ವಾದ್ರಾ ಕ್ಷಮಾದಾನ
Friday, November 11, 2022
ನವದೆಹಲಿ : ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರು ಮಂದಿ ಹಂತಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ದೀರ್ಘ ಕಾಲದ ಜೈಲು ವಾಸದ ಬಳಿಕ ಜೈಲಿನಿಂದ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ಆದೇಶ ನೀಡಿದೆ.
ಪ್ರಕರಣದಲ್ಲಿ ನಳಿನಿ ಶ್ರೀಹರನ್ ಸೇರಿದಂತೆ ಐವರು ತಮಿಳುನಾಡು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಹಿಂದೆ ತಮಿಳುನಾಡು ಸರ್ಕಾರವೂ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಪತ್ರ ಬರೆದಿತ್ತು. ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದ್ದು, ಅವರ ಬಿಡುಗಡೆಗೆ ಆದೇಶ ನೀಡಿದೆ. ಮೇ ತಿಂಗಳಲ್ಲಿ ಇನ್ನೋರ್ವ ಆರೋಪಿ ಪೇರಾರಿವಾಳನ್ ಅವರನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು.
ಹತ್ಯೆ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ 21 ಮಂದಿಯ ಪೈಕಿ ನಳಿನಿ ಶ್ರೀಹರನ್, ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಜೈಲಿನಲ್ಲಿದ್ದಾರೆ. ಸುಪ್ರೀಂ ರವಿಚಂದ್ರನ್ ನ್ಯಾಯಾಧೀಶರಾದ B.R ಗವಾಯಿ ಮತ್ತು B.V ನಾಗರತ್ನ ಅವರಿದ್ದ ಪೀಠವು ಅಪರಾಧಿಗಳ ಬಿಡುಗಡೆಗೆ ಆದೇಶ ನೀಡಿದೆ.
1991ರ ಮೇ 21ರಂದು ತಮಿಳುನಾಡಿನ ಪೆರಂಬೂರಿನಲ್ಲಿ LET ಗ್ಯಾಂಗ್ ನ ಮಹಿಳಾ ಆತ್ಯಾಹುತಿ ಬಾಂಬರ್ ಗಳು ರಾಜೀವ್ ಗಾಂಧಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹತ್ಯೆ ಮಾಡಿದ್ದರು.