ಮಂಗಳೂರು: ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ. ಮೀನಿನ ಬಲೆ ಬೆಂಕಿಗಾಹುತಿ
Saturday, November 12, 2022
ಮಂಗಳೂರು: ಇತ್ತೀಚೆಗೆ ನಗರದ ಬೆಂಗ್ರೆಯಲ್ಲಿ ಲಂಗರು ಹಾಕಿದ್ದ ಮೂರು ಬೋಟ್ ಗಳು ಅಗ್ನಿ ಅವಘಡಕ್ಕೆ ತುತ್ತಾಗಿ ಧಗಧಗನೆ ಹೊತ್ತಿ ಉರಿದು ಸಾಕಷ್ಟು ನಾಶ - ನಷ್ಟ ಸಂಭವಿಸಿತ್ತು. ಇದರ ಬೆನ್ನಲ್ಲೇ ಆಕಸ್ಮಿಕ ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ. ಮೀನಿನ ಬಲೆಯ ರಾಶಿ ಹೊತ್ತಿ ಉರಿದ ದುರ್ಘಟನೆ ನಿನ್ನೆ ಮೀನುಗಾರಿಕಾ ಪ್ರದೇಶ ಧಕ್ಕೆಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ 12.30 ಸುಮಾರಿಗೆ ಮೀನುಗಾರಿಕೆಗೆಂದು ರಾಶಿ ಹಾಕಿದ್ದ ಮೀನು ಬಲೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಸುತ್ತಲೂ ವ್ಯಾಪಿಸಿದೆ. ಪರಿಣಾಮ ಮೀನುಗಾರಿಕಾ ಬಲೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಸ್ಥಳದಲ್ಲಿದ್ದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ತಂಡ ಬೆಂಕಿ ನಂದಿಸಲು ಹರಸಾಹಪಟ್ಟರೂ ಬೆಂಕಿಯ ಕೆನ್ನಾಲಿಗೆ ಆವರಿಸಿದ ಪರಿಣಾಮ, ಬಲೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಆದರೆ ಸ್ಥಳದಲ್ಲಿದ್ದ ಸಣ್ಣ ದೋಣಿಯೊಂದನ್ನು ಸ್ಥಳಾಂತರ ಮಾಡಿರುವ ಪರಿಣಾಮ ಹೆಚ್ಚಿನ ದುರಂತ ತಪ್ಪಿದಂತಾಗಿದೆ.