ಸಿನಿಪ್ರಿಯರಿಗೆ ಸಿಹಿ ಸುದ್ದಿ;ವಿಶ್ವದಾದ್ಯಂತ ಅಬ್ಬರಿಸಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಕನ್ನಡದ ಕಾಂತಾರ ಚಿತ್ರ ನಾಳೆ ಒಟಿಟಿಯಲ್ಲಿ ರಿಲೀಸ್
Wednesday, November 23, 2022
ವಿಶ್ವದಾದ್ಯಂತ ಅಬ್ಬರಿಸಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಕನ್ನಡದ ಕಾಂತಾರ ಚಿತ್ರ ನಾಳೆ ( ನವೆಂಬರ್ 24 ರಂದು ) ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.ತುಳುನಾಡಿನ ಸಂಪ್ರದಾಯವನ್ನು ಸಾರುವ ಈ ಚಿತ್ರಕ್ಕೆ ಇಡೀ ವಿಶ್ವವೇ ಮನಸೋತಿದೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ರಜನಿಕಾಂತ್, ಕಂಗನಾ ರಣಾವತ್, ವಿವೇಕ್ ಅಗ್ನಿಹೋತ್ರಿ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರವನ್ನು ಕೊಂಡಾಡಿದ್ದಾರೆ.
ಇಷ್ಟೆಲ್ಲ ಪ್ರಶಂಸೆ ಪಡೆದ ಸಿನಿಮಾವನ್ನು ಮನೆಯಲ್ಲೇ ಕುಳಿತು ಎಂಜಾಯ್ ಮಾಡಬೇಕು ಎಂಬ ಆಸೆ ಎಲ್ಲ ಪ್ರೇಕ್ಷಕರಿಗೂ ಇದೆ. ಈಗಾಗಲೇ ಚಿತ್ರಮಂದಿರದಲ್ಲಿ ನೋಡಿರುವವರು ಕೂಡ ಈ ಚಿತ್ರದ ಒಟಿಟಿ ರಿಲೀಸ್ ಗಾಗಿ ಕಾದಿದ್ದಾರೆ.
ಸದ್ಯ ಕಾದು ಕುಳಿತ ಸಿನಿಪ್ರಿಯರಿಗೆ ಖುಷಿ ವಿಚಾರ ಅಂದ್ರೆ ನಾಳೆ ಒಟಿಟಿಯಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ. ಇಂದು ಮಧ್ಯ ರಾತ್ರಿಯಿಂದಲೇ ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ಸ್ಟ್ರೀಮ್ ಆಗಲಿದೆ. ಈ ಬಗ್ಗೆ ನಟ ರಿಷಬ್ ಕೂಡಾ ಟ್ವಿಟ್ ಮಾಡಿದ್ದು, 'ನಾಳೆಯಿಂದ ಕಾಂತಾರ ಅಮೆಜಾನ್ ಪ್ರೈಮ್ ನಲ್ಲಿ ಬರಲಿದೆ ಎಂದಿದ್ದಾರೆ. ಕನ್ನಡ ತೆಲುಗು, ತಮಿಳು,ಮಲಯಾಳಂ ಭಾಷೆಯಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.