ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ ಕಿಚ್ಚು; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನ್ಯಮತೀಯರಿಗೆ ವ್ಯಾಪಾರ ವಹಿವಾಟು ನಿಷೇಧ ಬ್ಯಾನರ್ !
Thursday, November 24, 2022
ಸುಬ್ರಹ್ಮಣ್ಯ: ಕರಾವಳಿಯಲ್ಲಿ ತಣ್ಣಗಾಗಿದ್ದ ಧರ್ಮ ದಂಗಲ್ ಮತ್ತೆ ಕಿಚ್ಚು ಹಚ್ಚಿಕೊಂಡಿದ್ದು, ಈ ಬಾರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಉತ್ಸವ ಸಂದರ್ಭ ಅನ್ಯಧರ್ಮೀಯರ ವ್ಯಾಪಾರಕ್ಕೆ ನಿಷೇಧ ಹೇರಬೇಕೆಂದು ಹಿಂದು ಸಂಘಟನೆಗಳು ಬ್ಯಾನರ್ ಅಳವಡಿಸಿದೆ.
ಸುಬ್ರಮಣ್ಯ ಕುಮಾರಧಾರ ನದಿ ಬಳಿಯ ದೇವಸ್ಥಾನದ ಪ್ರವೇಶ ದ್ವಾರದ ಸಮೀಪ ಹಿಂದು ಜಾಗರಣಾ ವೇದಿಕೆ ಸುಬ್ರಹ್ಮಣ್ಯ ಘಟಕ ಹೆಸರಿನಲ್ಲಿ ಈ ರೀತಿಯ ಪ್ಲೆಕ್ಸ್ ಹಾಕಲಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಬಳಿಕ ಮತ್ತೆ ವ್ಯಾಪಾರ ನಿಷೇಧ ಜೀವ ಪಡೆದುಕೊಂಡಿದೆ.ಸುಬ್ರಹ್ಮಣ್ಯ ದೇವಳದಲ್ಲಿ ಹದಿನೈದು ದಿನಗಳ ಕಾಲ ಷಷ್ಠಿ ಮಹೋತ್ಸವ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಕುಕ್ಕೆಗೆ ಆಗಮಿಸಲಿದ್ದಾರೆ. ಇದೀಗ ಈ ಬ್ಯಾನರ್ ಅಳವಡಿಕೆ ಮತ್ತೆ ವಿವಾದಕ್ಕೆ ಕಾರಣವಾಗುವಂತಿದೆ.