ತಾಯಿಯನ್ನು ದೇಗುಲಕ್ಕೆ ಹೊತ್ತುಕರೆತಂದ ಮಗ.ಇಳಿವಯಸ್ಸಿನ ತಾಯಿಯ ಕಟೀಲು ದೇವಿಯ ದರ್ಶನ ಮಾಡಿಸಿದ ಪುತ್ರ; ಆಧುನಿಕ ಶ್ರವಣ ಕುಮಾರ ತಿಪಟೂರಿನ ಶಿವರುದ್ರಯ್ಯ

ತಾಯಿಯನ್ನು ದೇಗುಲಕ್ಕೆ ಹೊತ್ತುಕರೆತಂದ ಮಗ.ಇಳಿವಯಸ್ಸಿನ ತಾಯಿಯ ಕಟೀಲು ದೇವಿಯ ದರ್ಶನ ಮಾಡಿಸಿದ ಪುತ್ರ; ಆಧುನಿಕ ಶ್ರವಣ ಕುಮಾರ ತಿಪಟೂರಿನ ಶಿವರುದ್ರಯ್ಯ


ಮೂಲ್ಕಿ: ದೃಷ್ಟಿಹೀನರಾದ ತಮ್ಮ ತಂದೆ ತಾಯಿಗಳ ತೀರ್ಥಯಾತ್ರೆ ಕೈಗೊಳ್ಳಬೇಕೆಂಬ ಆಸೆಯನ್ನು ಈಡೇರಿಸಲು ಶ್ರವಣಕುಮಾರ ಬೆತ್ತದ ಬುಟ್ಟಿಯಲ್ಲಿ ತನ್ನ ತಂದೆ ತಾಯಿಯರನ್ನು ಕುಳ್ಳಿರಿಸಿ ಹೆಗಲಲ್ಲಿ ಹೊತ್ತು ಕೊಂಡು ತೀರ್ಥಯಾತ್ರೆಗೆ ಕರೆದೊಯ್ಯುವ ಕಥೆಯನ್ನು ಪಾಠ ಪುಸ್ತಕಗಳಲ್ಲಿ ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ಆಧುನಿಕ ಶ್ರವಣ ಕುಮಾರನಂತಿರುವ ತಿಪಟೂರಿನ ಶಿವರುದ್ರಯ್ಯ ಎಂಬವರು ತಮ್ಮ 99 ವರ್ಷದ ಇಳಿವಯಸ್ಸಿನಲ್ಲಿರುವ ತಾಯಿಯನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊತ್ತುಕೊಂಡು ಬಂದು ದೇವಿಯ ದರ್ಶನ ಮಾಡಿಸಿದ್ದಾರೆ.

ಶಿವರುದ್ರಯ್ಯ ಅವರ ತಾಯಿಗೆ ಒಂದು ಕಣ್ಣಿನ ದೃಷ್ಟಿ ಹೋಗಿದ್ದು, ತಿಪಟೂರಿನಿಂದ ಬಸ್‌ನಲ್ಲಿ ಕರೆದುಕೊಂಡು ಬಂದಿದ್ದಾರೆ. ಬಳಿಕ ದೇವಸ್ಥಾನಕ್ಕೆ ಹೊತ್ತುಕೊಂಡು ಬಂದು ದುರ್ಗಾಪರಮೇಶ್ವರಿ ದೇವಿಯ ದರ್ಶನ ಮಾಡಿಸಿದ್ದಾರೆ. ಮನುಷ್ಯ ಸಂಬಂಧಗಳಿಗೆ ಬೆಲೆಯಿಲ್ಲದ ಈ ಕಾಲದಲ್ಲಿ ತನ್ನ ತಾಯಿಗೆ ಪುಣ್ಯಕ್ಷೇತ್ರದ ದರ್ಶನ ಮಾಡಿಸಿದ ಇವರು ಇತರರಿಗೆ ಆದರ್ಶಪ್ರಾಯರಾಗಿದ್ದಾರೆ. ಈ ಫೋಟೊವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ads on article

Advertise in articles 1

advertising articles 2

Advertise under the article