ಮಂಗಳೂರು: ಭಯೋತ್ಪಾದನೆಯ ವಿರುದ್ಧ ವಿಎಚ್ ಪಿ ಬಜರಂಗದಳದಿಂದ ಜನ ಜಾಗೃತಿ ಅಭಿಯಾನ

ಮಂಗಳೂರು: ಭಯೋತ್ಪಾದನೆಯ ವಿರುದ್ಧ ವಿಎಚ್ ಪಿ ಬಜರಂಗದಳದಿಂದ ಜನ ಜಾಗೃತಿ ಅಭಿಯಾನ


ಮಂಗಳೂರು: ವಿಎಚ್ ಪಿ ಬಜರಂಗದಳ - ದುರ್ಗಾವಾಹಿನಿ ವತಿಯಿಂದ ಇಂದು ಬೆಳಗ್ಗೆ ನಗರದ ಏಳು ಕಡೆಗಳಲ್ಲಿ ಏಕಕಾಲದಲ್ಲಿ ಭಯೋತ್ಪಾದನೆಯ ವಿರುದ್ಧ ಜನ ಜಾಗೃತಿ ಅಭಿಯಾನ ನಡೆಯಿತು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಜ್ಯೋತಿ, ಉರ್ವಸ್ಟೋರ್, ಕಾವೂರು, ಮೂಡಬಿದಿರೆ, ತೊಕ್ಕೊಟ್ಟು, ಗುರುಪುರ ಕೈಕಂಬ, ಸುರತ್ಕಲ್ ನಲ್ಲಿ ಜನ ಜಾಗೃತಿ ಅಭಿಯಾನ ನಡೆಯಿತು. ಈ ಸಂದರ್ಭ ವಿಎಚ್ ಪಿ ಬಜರಂಗದಳ - ದುರ್ಗಾವಾಹಿನಿ ಕಾರ್ಯಕರ್ತರು ಭಯೋತ್ಪಾದನೆಯ ವಿರುದ್ಧದ ಭಿತ್ತಿಪತ್ರ ಹಿಡಿದು ಪ್ರತಿರೋಧ ವ್ಯಕ್ತಪಡಿಸಿದರು.
ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರದೇಶ್ ಪ್ರಮುಖ್ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಮಾತನಾಡಿ, ಹಿಂದೂಗಳನ್ನು ಸರ್ವನಾಶ ಮಾಡಲು, ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಮುಸ್ಲಿಮರು‌ ಸಾಕಷ್ಟು ವರ್ಷಗಳಿಂದ ಪ್ರಯತ್ನ ಮಾಡುತಿದ್ದಾರೆ. ಅದನ್ನು ವ್ಯತ್ಯಸ್ಥವಾದ ರೀತಿಯಲ್ಲಿ, ಹೊಸಹೊಸ ರೀತಿಯಲ್ಲಿ ಇಂತಹ ಕೃತ್ಯಗಳನ್ನು ಎಸಗುತ್ತಲೇ ಬರುತ್ತಿದ್ದಾರೆ‌. ಲವ್ ಜಿಹಾದ್ ಮಾಡಿ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಾಂಬ್ ಬ್ಲಾಸ್ಟ್, ಶಾಲಾ ವಿದ್ಯಾರ್ಥಿಗಳನ್ನು ಹಾದಿ ತಪ್ಪುವಂತಹ ಕಾರ್ಯಗಳಲ್ಲಿ ತೊಡಗಿಸುವಂತಹ ಕಾರ್ಯವನ್ನು ಮಾಡುತ್ತಿದೆ. ಈ ರೀತಿಯ ಕೃತ್ಯಗಳನ್ನು ಮಟ್ಟ ಹಾಕುವಂತಹ ಕಾನೂನನ್ನು ಸರಕಾರ ಜಾರಿಗೊಳಿಸಬೇಕು ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article