Mangalore: ಶಂಕಿತ ಉಗ್ರ ಶಾರೀಕ್ ಗುಣಮುಖ ಆದ ತಕ್ಷಣ ಪೊಲೀಸ್ ವಶಕ್ಕೆ

Mangalore: ಶಂಕಿತ ಉಗ್ರ ಶಾರೀಕ್ ಗುಣಮುಖ ಆದ ತಕ್ಷಣ ಪೊಲೀಸ್ ವಶಕ್ಕೆ

ಮಂಗಳೂರು: ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರ ಶಾರೀಕ್ ಗುಣಮುಖ ಆದ ತಕ್ಷಣ ವಶಕ್ಕೆ ಪಡೆಯುತ್ತೇವೆ ಎಂದು ಆಸ್ಪತ್ರೆಗೆ ಆಗಮಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
Video


ಶಂಕಿತ ಉಗ್ರ ಶಾರೀಕ್ ಹಾಗೂ ಆಟೋ ಚಾಲಕ ಪುರುಷೋತ್ತಮ್ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ. ಪುರುಷೋತ್ತಮ್ ಆರೋಗ್ಯ ಸ್ಥಿರವಾಗಿದೆ ಮಾತನಾಡುವ ಸ್ಥಿತಿಯಲ್ಲಿದ್ದಾರೆ. ಅವರ ದೇಹದ ಅಂಗಾಗಗಳ ಸ್ಥಿತಿ ಸ್ಥಿರವಾಗಿದೆ. ಕುಟುಂಬ ಸದಸ್ಯರೂ ಅವರೊಂದಿಗಿದ್ದಾರೆ. ಜೊತೆಗೆ ಶಾರೀಕ್ ಗೂ ಚಿಕಿತ್ಸೆ ಮುಂದುವರಿದಿದೆ. ಆದರೆ ಆತ ಮಾತನಾಡುವಷ್ಟು ಶಕ್ತನಾಗಿಲ್ಲ. ಆದ್ದರಿಂದ ಪೊಲೀಸ್ ವಿಚಾರಣೆಗಾಗಿ ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಇಂದು ಬೆಳಗ್ಗೆ ಆತನ ಕುಟುಂಬ ಸದಸ್ಯರು ಗುರುತು ಪತ್ತೆ ಮಾಡಿದ್ದಾರೆ.‌ ಆತನ ಆರೋಗ್ಯ ಸುಧಾರಣೆಯ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿಲ್ಲ. ಆತನಲ್ಲಿ ಸಾಕಷ್ಟು ಮಾಹಿತಿಯಿರುವ ಹಿನ್ನೆಲೆಯಲ್ಲಿ ಆತನಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಯಾವಾಗ ಆತ ಪ್ರಶ್ನೆಗೆ ಉತ್ತರ ನೀಡಲು ಶಕ್ತನಾಗುತ್ತಾನೆ ಎಂಬುದನ್ನು ಗಮನಿಸಿ ವಶಕ್ಕೆ ಪಡೆಯುತ್ತೇವೆ. ನಮ್ಮ ಓರ್ವ ಅಧಿಕಾರಿಯನ್ನು ಆಸ್ಪತ್ರೆಯಲ್ಲಿ ನೇಮಕ ಮಾಡಲಾಗಿದೆ. ಅವರು ಆತನ ಆರೋಗ್ಯದ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡುತ್ತಾರೆ. ಈಗಾಗಲೇ ತಹಶೀಲ್ದಾರ್ ಬಂದು ಸಂತ್ರಸ್ತ ಚಾಲಕನಿಗೆ ಪರಿಹಾರ ನೀಡುವ ಬಗ್ಗೆ ಮಾಹಿತಿ ಪಡೆದು ತೆರಳಿದ್ದಾರೆ ಜಿಲ್ಲಾಧಿಕಾರಿಯವರು ಸರ್ಕಾರದೊಂದಿಗೆ ಮಾತನಾಡಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article