ಮಂಗಳೂರು: ಎಎಪಿಯನ್ನು ಶ್ಲಾಘಿಸಿದ ವ್ಯಕ್ತಿಗೆ ಉಪಮೇಯರ್ ಪತಿಯಿಂದ ಧಮ್ಕಿ; ಎಎಪಿ ಆರೋಪ

ಮಂಗಳೂರು: ಎಎಪಿಯನ್ನು ಶ್ಲಾಘಿಸಿದ ವ್ಯಕ್ತಿಗೆ ಉಪಮೇಯರ್ ಪತಿಯಿಂದ ಧಮ್ಕಿ; ಎಎಪಿ ಆರೋಪ


ಮಂಗಳೂರು: ಮಂಗಳೂರು 41ನೇ ವಾರ್ಡ್ ನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದ ಎಎಪಿ ಕಾರ್ಯವನ್ನು ಮೆಚ್ಚಿ ಮಾತನಾಡಿರುವ ನಾಗರಿಕರೋರ್ವರಿಗೆ ಮನಪಾ ಉಪ ಮೇಯರ್ ಪತಿ ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ನಾವು ಶೀಘ್ರದಲ್ಲೇ ಪೊಲೀಸ್ ದೂರು ದಾಖಲಿಸುತ್ತೇವೆ. ಹಲ್ಲೆ ಮಾಡಿದ್ದಲ್ಲಿ ಕಾನೂನು ಸಮರ ಸಾರಲಿದ್ದೇವೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿ,‌‌ ತಮ್ಮ ವಾರ್ಡ್ ನ ಹಲವಾರು ವರ್ಷಗಳ ಕುಡಿಯುವ ನೀರಿನ ಸಮಸ್ಯೆಯನ್ನು ಎಎಪಿ ಸಿಟಿಝನ್ ಹೆಲ್ಪ್ ಲೈನ್ ಪೋರ್ಟಲ್ ಗೆ ದೂರು ನೀಡಿದ್ದರು. ಅವರ ಸಮಸ್ಯೆಗೆ ಸ್ಪಂದಿಸಿದ ನಮ್ಮ ಪಕ್ಷದ ಪ್ರತಿನಿಧಿಗಳು 24 ಗಂಟೆಯೊಳಗೆ ಪರಿಹಾರ ನೀಡಿದ್ದರು. ಈ ಬಗ್ಗೆ ನಿನ್ನೆ ನಡೆದ ನಮ್ಮ ಕಾರ್ಯಕ್ರಮದಲ್ಲಿ ಎಎಪಿ ಕಾರ್ಯವನ್ನು ಅವರು ಶ್ಲಾಘಿಸಿದ್ದರು. ಇದನ್ನು ಸಹಿಸದ ಉಪ ಮೇಯರ್ ಪತಿ ಆ ವ್ಯಕ್ತಿಗೆ ಫೋನ್ ಮಾಡಿ ಬೆದರಿಕೆಯೊಡ್ಡಿ 'ಮನೆಯೊಳಗಡೆ ಬಂದು ಹೊಡೆಯುತ್ತೇವೆ' ಎಂದು ಧಮ್ಕಿ ಹಾಕಿದ್ದಾರೆ‌. ಅವರನ್ನು ಮುಟ್ಟಿದರೆ ನಾವು ಸುಮ್ಮನಿರೋದಿಲ್ಲ ಎಂದು ಹೇಳಿದರು.

ರಾಜ್ಯದ ಎಲ್ಲಾ ಅಭಿವೃದ್ಧಿ ಕೆಲಸಗಳು ಬೆಂಗಳೂರು ಸೀಮಿತವಾಗಿದೆ. ಆದರೆ ರಸ್ತೆ, ಜಲ, ವಾಯು ಸಾರಿಗೆಯಿರುವ ಮಂಗಳೂರು ಅಭಿವೃದ್ಧಿ ಆಗಬೇಕು. ಆದ್ದರಿಂದ ಎಎಪಿ ರಾಜ್ಯದ 224 ಕ್ಷೇತ್ರಗಳಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಲಿದ್ದೇವೆ. ಅಲ್ಲದೆ ನಾವು ಪಕ್ಕಾ ಕೆಲಸ ಮಾಡಿ ಕೊಡುವ ಗ್ಯಾರಂಟಿ ಕೊಡುತ್ತೇವೆ. ಇಷ್ಟು ಸಮಯ ರಾಜ್ಯದ ಜನತೆಗೆ ಮೂರು ಪಕ್ಷಗಳಲ್ಲದೆ ಪರ್ಯಾಯ ಇರಲಿಲ್ಲ. ಈ ಬಾರಿ ಜನರ ಮುಂದೆ ಸ್ಪಷ್ಟವಾದ ರಾಜಕೀಯದ ಆಯ್ಕೆಯಿದೆ. ರಾಜ್ಯದಲ್ಲಿ ಪರ್ಸೆಂಟ್ ರಾಜಕಾರಣದ ಚರ್ಚೆ ನಡೆಯುತ್ತಿದ್ದರೆ, ಎಎಪಿ ದೆಹಲಿ ಹಾಗೂ ಪಂಜಾಬ್ ನಲ್ಲಿ 0% ಭ್ರಷ್ಟಾಚಾರದ ಸರಕಾರ ಮಾಡಬಹುದು ಎಂದು ಎಎಪಿ ತೋರಿಸಿದೆ. ಜನತೆಯ ನಿರೀಕ್ಷೆಗೆ ತಕ್ಕಂತೆ ನಾವು ಕೆಲಸ ಮಾಡುತ್ತೇವೆ ಎಂದು ಪೃಥ್ವಿ ರೆಡ್ಡಿ ಹೇಳಿದರು.
Video




Ads on article

Advertise in articles 1

advertising articles 2

Advertise under the article