ಮಂಗಳೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಬಂಧನಕ್ಕಾಗಿ ಎನ್ಐಎ ಹುಡುಕಾಟ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಮಾಹಿತಿ ನೀಡಿದವರಿಗೆ ಲಕ್ಷ ಲಕ್ಷ ನಗದು ಬಹುಮಾನ ಘೋಷಿಸಿದ ಎನ್ಐಎ mng
Tuesday, November 1, 2022
ಮಂಗಳೂರು: ತಲೆಮರೆಸಿಕೊಂಡ ನಾಲ್ವರು ಪ್ರವೀಣ್ ನೆಟ್ಟಾರು ಹಂತಕರ ಮೇಲೆ ಎನ್ಐಎ ಲುಕ್ಔಟ್ ನೊಟೀಸ್ ಜಾರಿಗೊಳಿಸಿದೆ.
ಜುಲೈ 27ರಂದು ಬಿಜೆಪಿ ಯುವ ಮೋರ್ಚ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ನಾಪತ್ತೆಯಾದ ಹಂತಕರು ಇನ್ನೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಈ ನಾಲ್ವರು ಆರೋಪಿಗಳ ಪತ್ತೆಗೆ ಎನ್ಐಎ ಲುಕ್ ಔಟ್ ನೋಟಿಸ್ ಹೊರಡಿಸಿ ಲಕ್ಷಾಂತರ ರೂ. ಬಹುಮಾನ ಘೋಷಿಸಿದೆ.
ಬೆಳ್ಳಾರೆ ನಿವಾಸಿ ಮೂಡುಮನೆ ಮಹಮ್ಮದ್ ಮುಸ್ತಫಾ ಸುಳಿವು ನೀಡಿದರೆ 5 ಲಕ್ಷ ರೂ. ಬಹುಮಾನ. ಮಡಿಕೇರಿ ಗದ್ದಿಗೆ ಮಸೀದಿ ಬಳಿ ನಿವಾಸಿ ತುಫೈಲ್ ಎಚ್.ಎಂ. ಸುಳಿವು ನೀಡಿದ್ದಲ್ಲಿ 5 ಲಕ್ಷ ರೂ. ಬಹುಮಾನ. ಸುಳ್ಯದ ಕಲ್ಲುಮುಟ್ಟು ನಿವಾಸಿ ಉಮ್ಮರ್ ಫಾರೂಕ್ ಸುಳಿವು ನೀಡಿದರೆ 2 ಲಕ್ಷ ರೂ. ಬಹುಮಾನ. ಬೆಳ್ಳಾರೆ ನಿವಾಸಿ ಅಬೂಬುಕರ್ ಸಿದ್ದೀಕ್ ಸುಳಿವು ನೀಡಿದರೆ 5 ಲಕ್ಷ ರೂ. ಬಹುಮಾನವನ್ನು ಎನ್ಐಎ ಘೋಷಿಸಿದೆ.
ಇವರೆಲ್ಲರೂ ನಿಷೇಧಿತ ಪಿಎಫ್ಐ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ. ಮಾಹಿತಿ ನೀಡುವವರು 080-29510900, 8904241100 ಅಥವಾ info.bir.nia@gov.inಗೆ ಮಾಹಿತಿ ನೀಡಬೇಕೆಂದು ಎನ್ಐಎ ಮನವಿ ಮಾಡಿದೆ. ಅಲ್ಲದೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದೆ. ಈ ಪ್ರಕರಣ ಸಂಬಂಧ ಒಟ್ಟು 10 ಮಂದಿ ಆರೋಪಿಗಳನ್ನು ರಾಜ್ಯ ಪೊಲೀಸ್ ಮತ್ತು ಎನ್ಐಎ ಅಧಿಕಾರಿಗಳ ತಂಡ ಬಂಧಿಸಿತ್ತು.