ಆಟೋದಲ್ಲಿ ಬಾಂಬ್ ಸ್ಫೋಟ ಪ್ರಕರಣ: ಇದು ಆಕಸ್ಮಿಕ ಘಟನೆಯಲ್ಲ, ಭಯೋತ್ಪಾದಕ ಕೃತ್ಯ ; ಡಿಜಿಪಿ ಪ್ರವೀಣ್ ಸೂದ್ ಹೇಳಿಕೆ
Sunday, November 20, 2022
ಮಂಗಳೂರು:ಮಂಗಳೂರಿನ ಆಟೋದಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವಿಟ್ ಮಾಡಿ, ಆಕಸ್ಮಿಕ ಆಗಿರುವ ಘಟನೆಯಲ್ಲ ಇದೊಂದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತವಾಗಿದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆ ಕೃತ್ಯದ ಬಗ್ಗೆ ದೃಢವಾಗಿದೆ. ಆಕಸ್ಮಿಕ ರೀತಿಯಲ್ಲಿ ನಡೆದ ಘಟನೆಯಲ್ಲ, ಗಂಭೀರ ಡ್ಯಾಮೇಜ್ ಮಾಡುವ ಉದ್ದೇಶದಿಂದ ಕೃತ್ಯ ಎಸಗಲಾಗಿದೆ, ಇದೊಂದು ಭಯೋತ್ಪಾದಕ ಕೃತ್ಯ. ಕೇಂದ್ರೀಯ ಏಜನ್ಸಿಗಳ ಜೊತೆ ಸೇರಿ ರಾಜ್ಯ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು DJP ಪ್ರವೀಣ್ ಸೂದ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ನಿನ್ನೆ ಸಂಜೆ 5.30 ರ ವೇಳೆ ಮಂಗಳೂರು ನಗರದ ಕಂಕನಾಡಿ ಬಳಿಯ ನಾಗುರಿ ಎಂಬಲ್ಲಿ ಆಟೋದಲ್ಲಿ ಬ್ಲಾಸ್ಟ್ ಆಗಿತ್ತು. ಪ್ರೆಶರ್ ಕುಕ್ಕರ್ ಕುಕ್ಕರ್ ಸ್ಫೋಟಗೊಂಡಿದ್ದು ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಘಟನೆ ಬಗ್ಗೆ ತನಿಖೆಗೆ ಮಂಗಳೂರು ಕಮಿಷನರ್ ಮೂರು ಪೊಲೀಸ್ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.