ಮಂಗಳೂರು: ಆಟೋ ಸ್ಫೋಟಗೊಂಡ ಸ್ಥಳಕ್ಕೆ ಎನ್ಐಎ ತಂಡ ಆಗಮನ ಪರಿಶೀಲನೆ
Saturday, November 19, 2022
ಮಂಗಳೂರು: ನಗರದ ಗರೋಡಿ ಸಮೀಪ ನಡೆದಿರುವ ಆಟೋದಲ್ಲಿ ಸ್ಫೋಟವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಥಳಕ್ಕೆ ಎನ್ಐಎ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.
ಸ್ಥಳಕ್ಕೆ ಆಗಮಿಸಿದ ಎನ್ಐಎಯ ನಾಲ್ವರ ತಂಡ ಆಟೋದಲ್ಲಿ ಸ್ಫೋಟಗೊಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿತು. ಬಳಿಕ ಅಲ್ಲೇ ರಸ್ತೆಯ ಮತ್ತೊಂದೆಡೆ ಆಟೋರಿಕ್ಷಾವನ್ನು ಇರಿಸಿದ್ದ ಸ್ಥಳಕ್ಕೆ ತೆರಳಿ ಆಟೋವನ್ನು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.