ಮಂಗಳೂರು: ಆಟೋರಿಕ್ಷಾ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಭಯೋತ್ಪಾದಕ ಶಾರೀಕ್ ನೊಂದಿಗೆ ಮತ್ತೊಬ್ಬನಿದ್ದ ಸಿಸಿ ಕ್ಯಾಮರದಲ್ಲಿ ಸೆರೆ
Tuesday, November 22, 2022
ಮಂಗಳೂರು: ಆಟೋರಿಕ್ಷಾದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಭಯೋತ್ಪಾದಕ ಮೊಹಮ್ಮದ್ ಶಾರೀಕ್ ನೊಂದಿಗೆ ಮೈಸೂರಿನಿಂದ ಮತ್ತೊಬ್ಬನೂ ಬಂದಿದ್ದ ಎಂಬ ವಿಚಾರವೊಂದು ಇದೀಗ ಬಹಿರಂಗಗೊಂಡಿದೆ.ಇದರ ಸಿಸಿ ಟಿವಿ ಫೂಟೇಜ್ ವೈರಲ್ ಆಗುತ್ತಿದೆ.
ಮೈಸೂರು - ಮಂಗಳೂರು ಬಸ್ಸಿನಲ್ಲಿ ಬಂದಿದ್ದ ಈ ಇಬ್ಬರು ಪಡೀಲಿನಲ್ಲಿ ಇಳಿದಿರುವ ಮಾಹಿತಿ ಮಾಹಿತಿ ಲಭ್ಯವಾಗಿದೆ. ಪಡೀಲ್ ನಲ್ಲಿ ಬಸ್ ನಿಲ್ದಾಣದಲ್ಲಿ ಇಳಿದ ಇಬ್ಬರೂ ನಾಗುರಿಗೆ ನಡೆದು ಹೋಗಿದ್ದಾರೆ. ನಾಗುರಿಯಲ್ಲಿ ವೈನ್ ಶಾಪ್ ಒಂದರಲ್ಲಿ ಮದ್ಯದ ಬಾಟಲಿಯನ್ನು ಖರೀದಿಸಿದ್ದರು. ವೈನ್ ಶಾಪ್ ನಿಂದ ಹೊರ ಹೋಗುವ ವೇಳೆ ಇಬ್ಬರು ಇದ್ದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬ್ಯಾಗ್ ಹಿಡಿದುಕೊಂಡು ಇಬ್ಬರು ವೈನ್ ಶಾಪ್ ನಿಂದ ಹೊರ ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಂಪು ಶರ್ಟ್ ಹಾಕಿದ್ದು ಮೊಹಮ್ಮದ್ ಶಾರೀಕ್ ಎಂದು ಹೇಳಲಾಗುತ್ತಿದೆ. ಹಾಗಾದರೆ ಜೊತೆಗಿದ್ದ ವ್ಯಕ್ತಿ ಎಲ್ಲಿ ಹೋಗಿದ್ದಾನೆ ಎಂಬ ಪ್ರಶ್ನೆ ಉದ್ಭವವಾಗಿದೆ.