ಸುಳ್ಯ: ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಸಿ ಪರಾರಿಯಾದ ಪತಿ!?

ಸುಳ್ಯ: ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಸಿ ಪರಾರಿಯಾದ ಪತಿ!?

ಸುಳ್ಯ: ಬಾಡಿಗೆ ಮನೆಯೊಂದರಲ್ಲಿ ಮಹಿಳೆಯ ಶವ ಗೋಣಿ ಚೀಲದಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದ್ದು, ಪತಿಯೇ ಪತ್ನಿಯನ್ನು ಕೊಲೆಗೈದು ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಸುಳ್ಯ ತಾಲೂಕಿನ ಬೀರಮಂಗಲ ಎಂಬಲ್ಲಿ ಈ ಘಟನೆ ನಡೆದಿದೆ.

ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬಾತ ಕೃತ್ಯ ಎಸಗಿದ ಆರೋಪಿ ಎಂದು ಶಂಕಿಸಲಾಗಿದೆ.

ಇಮ್ರಾನ್  ಆರು ತಿಂಗಳಿನಿಂದ ಬೀರಮಂಗಲ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆಂದು ತಿಳಿಸಿ ತೆರಳಿದ್ದು ಹೋಗುವಾಗ ಅವನ ಪತ್ನಿಯನ್ನು ಕರೆದುಕೊಂಡು ಹೋಗದೆ ಒಬ್ಬನೇ ತೆರಳಿದ್ದ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರು.

ಪೋಲಿಸರಿಗೆ ವಿಷಯ ತಿಳಿಸಿ ಪೊಲೀಸರು ಸಂಜೆ ಬಾಡಿಗೆ ಮನೆಗೆ ಬಂದು ಬಾಗಿಲು ಒಡೆದು ಪರಿಶೀಲಿಸಿದ ಸಂದರ್ಭದಲ್ಲಿ ಮನೆಯೊಳಗೆ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸುಳ್ಯ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article