ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ  ಅಧಿಕೃತವಾಗಿ NIAಗೆ ಹಸ್ತಾಂತರ

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಅಧಿಕೃತವಾಗಿ NIAಗೆ ಹಸ್ತಾಂತರ


ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು ಎನ್ಐಎಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ತನಿಖೆಯನ್ನು ಕೈಗೆತ್ತಿಕೊಳ್ಳಲು NIA ತಂಡ ಮಂಗಳೂರಿಗೆ ಆಗಮಿಸಿದೆ. 

ನವೆಂಬರ್19ರಂದು ನಗರದ ನಾಗುರಿ ಸಮೀಪ ಶಂಕಿತ ಭಯೋತ್ಪಾದಕ ಶಾರೀಕ್ ನಲ್ಲಿದ್ದ ಕುಕ್ಕರ್ ಬಾಂಬ್ ರಿಕ್ಷಾದಲ್ಲಿ ಸಂಚಾರದಲ್ಲಿದ್ದಾಗಲೇ ಸ್ಫೋಟಗೊಂಡಿತ್ತು. ಘಟನೆ ನಡೆದ ಮರುದಿನದಿಂದಲೇ ಎನ್ಐಎ ತಂಡ ಮಂಗಳೂರು ಪೊಲೀಸರೊಂದಿಗೆ ತನಿಖೆಗೆ ಕೈಜೋಡಿಸಿತ್ತು.ಆ ಬಳಿಕ ಕೇಂದ್ರ ಸರಕಾರ ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿತ್ತು. ಇದೀಗ ಪ್ರಕರಣದ ವಿಚಾರಣೆಯನ್ನು ಮಂಗಳೂರು ಪೊಲೀಸ್ ಆಯುಕ್ತರು ಅಧಿಕೃತವಾಗಿ ಎನ್ಐಎಗೆ ಹಸ್ತಾಂತರಿಸಿದ್ದಾರೆ‌. ಇಂದಿನಿಂದ ಪ್ರಕರಣದ ತನಿಖೆಯನ್ನು ಎನ್ಐಎ ನಡೆಸಲಿದೆ. 
ಕುಕ್ಕರ್ ಬಾಂಬ್ ಬ್ಲಾಸ್ಟ್ ನಲ್ಲಿ ಗಾಯಗೊಂಡ ಶಂಕಿತ ಭಯೋತ್ಪಾದಕ ಶಾರೀಕ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ‌. ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಶಾರೀಕ್ ವಿಚಾರಣೆಗೊಳಪಡಿಸಿದ್ದು, ಆತನ  ವಿಡಿಯೋ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article