ಮಂಗಳೂರು: ವೇದಿಕೆಯಲ್ಲಿ‌ ಖಾದರ್ ಮನವಿಗೆ ಸಿಎಂ ತಿರುಗೇಟು

ಮಂಗಳೂರು: ವೇದಿಕೆಯಲ್ಲಿ‌ ಖಾದರ್ ಮನವಿಗೆ ಸಿಎಂ ತಿರುಗೇಟು


ಮಂಗಳೂರು: ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಂಗಳೂರಿನ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳ ಮರುನಾಮಕರಣದ ಮನವಿಗೆ ಸಿಎಂ ಬೊಮ್ಮಾಯಿಯವರು ವೇದಿಕೆಯಲ್ಲಿಯೇ ತಿರುಗೇಟು ನೀಡಿರುವ ಪ್ರಸಂಗ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ನಡೆದಿದೆ.

ನಗರದ ಕರಾವಳಿ ಉತ್ಸವದ ಮೈದಾನದಲ್ಲಿ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಯು.ಟಿ.ಖಾದರ್ ಅವರು, ಸ್ವಾತಂತ್ರ್ಯ ಹೋರಾಟಗಾರರು ಜಾತಿ, ಧರ್ಮ ಮೀರಿ ನಿಂತವರು. ಸ್ವಾತಂತ್ರ್ಯ ಹೋರಾಟಗಾರರ ತತ್ವ ನಮಗೆ ಮುಖ್ಯ ಅಗಬೇಕೇ ಹೊರತು ಅವರ ಜಾತಿಯಲ್ಲ. ಎಲ್ಲರ ಇತಿಹಾಸಗಳು ಪಠ್ಯದಲ್ಲಿ ದಾಖಲಾಗಿ ಮುಂದಿನ ಪೀಳಿಗೆಗೆ ತಿಳಿಯಬೇಕು. ಸಿಎಂ ಬೊಮ್ಮಾಯಿಯವರು ದ.ಕ. ಜಿಲ್ಲೆಗೆ ಯಾವುದೇ ಯೋಜನೆ ನೀಡಿಲ್ಲ ಎಂದಿಲ್ಲ. ಆದರೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ರಾಣಿ ಹಾಗೂ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಬೇಕು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಬಳಿಕ ಮಾತಮಾಡಿದ  ಸಿಎಂ ಬಸವರಾಜ ಬೊಮ್ಮಾಯಿಯವರು ಯು ಟಿ ಖಾದರ್ ಅವರ ಮನವಿಯನ್ನು ಉಲ್ಲೇಖಿಸಿ, ನಮ್ಮ ಮಣ್ಣಲ್ಲೇ ಹುಟ್ಟಿದ ಕೆದಂಬಾಡಿ ರಾಮಯ್ಯ ಗೌಡರಂತಹ ಕ್ರಾಂತಿ ಪುರುಷರ ಪ್ರತಿಮೆ ಸ್ಥಾಪನೆಗೆ ಇಷ್ಟು ವರ್ಷ ಬೇಕಾಯ್ತಾ? ಎಂದು ಪ್ರಶ್ನಿಸಿದರು. ಕೆಲವೊಂದು ವಿಚಾರಗಳನ್ನು ವಿಧಾನಸಭೆಯಲ್ಲಿ ಮಾತನಾಡಬೇಕಾಗುತ್ತದೆ. ಆದರೆ ಈ ಸಭೆ ಅತ್ಯಂತ ಪವಿತ್ರವಾಗಿದೆ. ವಿಮಾನ ನಿಲ್ದಾಣಕ್ಕೆ, ರೈಲು ನಿಲ್ದಾಣಕ್ಕೆ ನಿಮ್ಮದೇ ಆಡಳಿತ ಇದ್ದ ವೇಳೆ ಹೆಸರಿಟ್ಟು ನಿಮಗೆ ಹೆಸರು ತೆಗೆದುಕೊಳ್ಳಬಹುದಿತ್ತು. ಯಾಕೆ ನೀವು ಮಾಡಿಲ್ಲ.  ಈ ದೇಶದಲ್ಲಿ ಬಹಳ ಪುಕ್ಕಟೆಯಾಗಿ ಸಿಗುವುದು ಸಲಹೆ ಸೂಚನೆ ಅಡ್ವೈಸ್. ಆದರೆ ಮೊದಲು ಯಾಕೆ ಮಾಡಿಲ್ಲ ಅನ್ನೋದನ್ನು ಯೋಚಿಸಬೇಕು ಎಂದು ಟಾಂಗ್ ನೀಡಿದರು.

Ads on article

Advertise in articles 1

advertising articles 2

Advertise under the article