ಮಂಗಳೂರು: ಮಳಲಿ ಮಸೀದಿ ಆಡಳಿತ ಮಂಡಳಿ ಅರ್ಜಿ ವಜಾ ಮಾಡಿದ ಕೋರ್ಟ್
Tuesday, November 8, 2022
ಮಂಗಳೂರು: ನಗರದ ಮಳಲಿ ಮಸೀದಿ ವಿವಾದ ಪ್ರಕರಣದಲ್ಲಿ ವಿಎಚ್ ಪಿ ಅರ್ಜಿ ಸ್ವೀಕರಿಸಿರುವ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಮಸೀದಿ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿದೆ.
ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲೇ ನಡೆಯಲಿದೆ ಮಳಲಿ ಮಸೀದಿಯ ಅರ್ಜಿಯನ್ನು ವಿಚಾರಣೆ ಮಾಡಿರುವ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಿಂದ ಮಹತ್ವದ ತೀರ್ಪು ನೀಡಿದೆ.
ಮೂಲ ದಾವೆ ಆಲಿಸಲು ವಿಚಾರಣಾಧೀನ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಕುರಿತು ತೀರ್ಪು ನೀಡಿದೆ. ವಿಎಚ್ ಪಿ ಅರ್ಜಿ ಸ್ವೀಕರಿಸಿರುವ ನ್ಯಾಯಾಲಯದಿಂದ ಜನವರಿ 8, 2023ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ. ಮಸೀದಿ ಕಾಮಗಾರಿಗೆ ತಡೆಯಾಜ್ಞೆ ತೆರವು ಮಾಡಿ ವಿಎಚ್ ಪಿ ಅರ್ಜಿಯನ್ನು ವಜಾ ಮಾಡಲು ಮಸೀದಿ ಕಮಿಟಿ ಮನವಿ ಮಾಡಿತ್ತು. ಆದರೆ ಮಸೀದಿ ಕಮಿಟಿಯ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಈ ಮೂಲಕ ಜ್ಞಾನವಾಪಿ ಮಾದರಿಯಲ್ಲೇ ಮಳಲಿ ಮಸೀದಿ ವಿವಾದದ ವಿಚಾರಣೆ ನಡೆಯಲಿದೆ.