ಮಂಗಳೂರು: ಓಟರ್ ಲಿಸ್ಟ್ ನಲ್ಲಿ ಹೆಸರು ಡಿಲಿಟ್ ಎಲೆಕ್ಷನ್ ಕಮಿಷನ್ ಮಾಡುವುದು ಬಿಜೆಪಿಯಲ್ಲ

ಮಂಗಳೂರು: ಓಟರ್ ಲಿಸ್ಟ್ ನಲ್ಲಿ ಹೆಸರು ಡಿಲಿಟ್ ಎಲೆಕ್ಷನ್ ಕಮಿಷನ್ ಮಾಡುವುದು ಬಿಜೆಪಿಯಲ್ಲ


ಮಂಗಳೂರು: ಓಟರ್ ಲಿಸ್ಟ್ ನಲ್ಲಿ ಮತದಾರರ ಹೆಸರು ಡಿಲಿಟ್ ಎಲೆಕ್ಷನ್ ಕಮಿಷನ್ ಮಾಡುವುದೇ ಹೊರತು, ಬಿಜೆಪಿಯಲ್ಲ. ಕಾಂಗ್ರೆಸ್ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಹೆಸರು ಡಿಲಿಟ್  ಯಾವುದೇ ರಾಜಕೀಯ ಪ್ರೇರಿತವಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿಂದು ಹೇಳಿದರು.

ಓಟರ್ ಲಿಸ್ಟ್ ನಲ್ಲಿ ಮತದಾರರ ಹೆಸರು ಡಿಲಿಟ್ ಆಗಿರುವ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಓಟರ್ ರಿವಿಷನ್ ಅಂದರೆ 18 ವರ್ಷಗಳ ಹೊಸ ಮತದಾರರ ಓಟರ್ ಲಿಸ್ಟ್ ಗೆ ಸೇರ್ಪಡೆ ಮತ್ತು ಪ್ರದೇಶವನ್ನು ಬಿಟ್ಟು ಹೋದವರನ್ನು, ಎರಡೆರಡು ಕಡೆಗಳಲ್ಲಿ ಹೆಸರು ನಮೂದಿಸಿದವರನ್ನು ಡಿಲಿಟ್ ಮಾಡಲಾಗುತ್ತದೆ. ಇದು ಪ್ರತೀ ವರ್ಷದ ನಡೆಯುವ ಪ್ರಕ್ರಿಯೆ ಎಂದರು.

ಕಾಂಗ್ರೆಸ್ ನವರು ಡೂಪ್ಲಿಕೇಟ್ ಓಟ್ ಮಾಡಿಸುವುದಕ್ಕೆ ಹೋಗ್ತಾರೆಂದು ಭಯದಿಂದ ಈ ರೀತಿ ಮಾತನಾಡುತ್ತಾರೋ ಎಂಬುದು ನನ್ನ ಊಹೆ. ಆದ್ದರಿಂದ ನಾವು ಅದರ ಬಗ್ಗೆ ತಲೆ ಕೆಡಿಸೋಲ್ಲ. ಈ ಬಗ್ಗೆ ತನಿಖೆಯಾಗಬೇಕಾದರೆ ತೀವ್ರವಾಗಿ ತನಿಖೆಯಾಗಲಿ ಎಂದು ಸಿಎಂ ಬೊಮ್ಮಾಯಿಯವರು ಹೇಳಿದರು.

Ads on article

Advertise in articles 1

advertising articles 2

Advertise under the article